ಹೊಟ್ಟೆ ತುಂಬಿದ ಮೇಲೂ ಹಸಿವಾಗುತ್ತಿದ್ದರೆ ಎಚ್ಚರ….! ಅತಿಯಾಗಿ ತಿನ್ನುವುದು ಕೂಡ ಗಂಭೀರ ಕಾಯಿಲೆಯ ಲಕ್ಷಣ

ಕೆಲವೊಮ್ಮೆ ಎಷ್ಟು ತಿಂದರೂ ತೃಪ್ತಿಯೇ ಆಗುವುದಿಲ್ಲ. ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಅಗತ್ಯಕ್ಕಿಂತ ಹೆಚ್ಚು ತಿನ್ನುವುದು ಮತ್ತು ಯಾವಾಗಲೂ ತಿನ್ನಬೇಕೆನಿಸುವುದು ಗಂಭೀರ ಕಾಯಿಲೆಯ ಸಂಕೇತ. ಇದನ್ನು ಬಿಂಜ್ ಈಟಿಂಗ್ ಡಿಸಾರ್ಡರ್ ಎಂದೂ ಕರೆಯುತ್ತಾರೆ. ಇದು ಮಾನಸಿಕ ಅಭ್ಯಾಸವಾಗಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಅತಿಯಾಗಿ ತಿನ್ನುವ ಕಾಯಿಲೆ

ಅನೇಕರು ವೀಕೆಂಡ್‌ನಲ್ಲಿ ಅಥವಾ ಯಾವುದೇ ವಿಶೇಷ ಸಂದರ್ಭದಲ್ಲಿ ಹೆಚ್ಚು ತಿನ್ನುತ್ತಾರೆ. ಹಾಗಂತ ಇದೆಲ್ಲ ಬಿಂಗ್ ಈಟಿಂಗ್ ಡಿಸಾರ್ಡರ್ ಎಂದರ್ಥವಲ್ಲ. ಈ ರೀತಿಯ ಅಭ್ಯಾಸ ನಿರಂತರವಾಗಿ ನಡೆಯುತ್ತಿದ್ದರೆ ಅದು ಆತಂಕದ ಸಂಗತಿ. ಬಿಂಜ್ ಈಟಿಂಗ್ ಡಿಸಾರ್ಡರ್‌ಗೆ ತುತ್ತಾದರೆ ತಿನ್ನುವುದನ್ನು ನಿಯಂತ್ರಿಸುವುದು ಸುಲಭವಲ್ಲ. ಆಹಾರ ತಿಂದ ಸ್ವಲ್ಪ ಹೊತ್ತಿನಲ್ಲೇ ಮತ್ತೇನಾದರೂ ತಿನ್ನಬೇಕೆಂಬ ಭಾವನೆ ಮೂಡುತ್ತದೆ.

ಬಿಂಗ್ ಈಟಿಂಗ್ ಡಿಸಾರ್ಡರ್‌ನ ಲಕ್ಷಣಗಳು

  1. ಬಿಂಜ್ ಈಟಿಂಗ್ ಡಿಸಾರ್ಡರ್ ಹೊಂದಿರುವ ವ್ಯಕ್ತಿಯು ಅಧಿಕ ತೂಕ ಅಥವಾ ಸ್ಥೂಲಕಾಯದ ಸಾಮಾನ್ಯ ಲಕ್ಷಣಗಳನ್ನು ಹೊಂದಿರಬಹುದು.
  2. ನಿಗದಿತ ಸಮಯದಲ್ಲಿ ಅಂದರೆ ಸುಮಾರು 2 ಗಂಟೆಯೊಳಗೆ ಹೆಚ್ಚು ಆಹಾರವನ್ನು ಸೇವಿಸುತ್ತಾರೆ.
  3. ತಿನ್ನುವ ಬಯಕೆಯ ಮೇಲೆ ನಿಯಂತ್ರಣವಿರುವುದಿಲ್ಲ.
  4. ಊಟ ಮಾಡುವಾಗ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ನಿರ್ಲಕ್ಷಿಸುವುದು.
  5. ಹೊಟ್ಟೆ ತುಂಬಿದ್ದರೂ ಮತ್ತಷ್ಟು ತಿನ್ನುವುದು.

ಬಿಂಜ್ ಈಟಿಂಗ್‌ ಡಿಸಾರ್ಡರ್‌ನ ಅನಾನುಕೂಲಗಳು

  1. ಹೆಚ್ಚು ತಿಂದ ನಂತರ ವಾಂತಿ ಮತ್ತು ಭೇದಿ.
  2. ಬಿಂಜ್‌ ಈಟಿಂಗ್ ಡಿಸಾರ್ಡರ್‌ ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
  3. ಸ್ಥೂಲಕಾಯತೆ ಮತ್ತು ಹೆಚ್ಚುವರಿ ಕೊಬ್ಬಿನಿಂದ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯ.
  4. ಬಿಂಜ್ ಈಟಿಂಗ್‌ಗೆ ಸಂಬಂಧಿಸಿದ ಸಮಸ್ಯೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಖಿನ್ನತೆ, ಒತ್ತಡ ಮತ್ತು ಅನೇಕ ಮಾನಸಿಕ ಸಮಸ್ಯೆಗಳು ಉಂಟಾಗಬಹುದು.
  5. ಬಿಂಜ್ ಈಟಿಂಗ್ ಡಿಸಾರ್ಡರ್‌ನಿಂದಾಗಿ ಮೂಳೆಗಳು ದುರ್ಬಲವಾಗಬಹುದು ಮತ್ತು ಆಸ್ಟಿಯೊಪೊರೋಸಿಸ್ ಅಪಾಯವು ಹೆಚ್ಚಾಗುತ್ತದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read