ಅಗತ್ಯಕ್ಕಿಂತ ಕಡಿಮೆ ʼನೀರುʼ ಕುಡಿದರೆ ಕಾಣಿಸಿಕೊಳ್ಳುತ್ತೆ ಈ 5 ಲಕ್ಷಣಗಳು….!

ಆರೋಗ್ಯವಾಗಿ, ಶಕ್ತಿವಂತವರಾಗಿ, ಫಿಟ್ ಆಗಿರಬೇಕು ಅಂದ್ರೆ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ.

ನೀರು ದೇಹದ ನಿರ್ವಿಶೀಕರಣ ಪ್ರಕ್ರಿಯೆಗೆ ಸಹಾಯ ಮಾಡುವ ಮೂಲಕ ಆರೋಗ್ಯ ಸಮಸ್ಯೆಗಳನ್ನು ದೂರವಿಡುತ್ತದೆ. ಹಾಗಾದ್ರೆ ನೀವು ಅಗತ್ಯವಿರುವಷ್ಟು ನೀರನ್ನು ಕುಡಿಯುತ್ತಿದ್ದೀರೋ ಇಲ್ಲವೋ ಅನ್ನೋದನ್ನು ಕೂಡ ಚೆಕ್ ಮಾಡಿಕೊಳ್ಳಿ. ಈ ಕೆಳಗಿನ 5 ಅಂಶಗಳ ಮೂಲಕ ಅದನ್ನು ಪತ್ತೆ ಮಾಡಬಹುದು.

ಪದೇ ಪದೇ ಹಸಿವಾಗುವುದು : ನಾವು ಸಾಕಷ್ಟು ನೀರು ಕುಡಿಯದೇ ಇದ್ದಲ್ಲಿ ನಮ್ಮ ದೇಹ ನಿರ್ಜಲೀಕರಣ ಉಂಟಾಗಿ, ಅದು ತುರ್ತುಕ್ರಮದ ಸ್ಥಿತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಯಕೃತ್ತು ತನ್ನ ಗ್ಲೈಕೋಜೆನ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ನಿಮಗೆ ಪದೇ ಪದೇ ಹಸಿವಾಗುತ್ತದೆ.

ಮೂತ್ರ ಹಳದಿ ಬಣ್ಣಕ್ಕೆ ತಿರುಗುವುದು : ಇದು ಡಿಹೈಡ್ರೇಶನ್ ನ ಅತ್ಯಂತ ಸಾಮಾನ್ಯ ಲಕ್ಷಣ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಕಿಡ್ನಿಯಿಂದ ಬರುವ ಎಲ್ಲಾ ತ್ಯಾಜ್ಯ ಕಡಿಮೆ ಮೂತ್ರದ ರೂಪದಲ್ಲಿ ಹೊರಬರುತ್ತದೆ. ಜೀವಾಣುಗಳ ಸಾಂದ್ರತೆಯ ಹೆಚ್ಚಳದಿಂದ ಮೂತ್ರದ ಬಣ್ಣ ಕಡು ಹಳದಿ ಬಣ್ಣಕ್ಕೆ ತಿರುಗುತ್ತದೆ.

ಉಸಿರಾಟದಲ್ಲಿ ತೊಂದರೆ : ಉಸಿರಾಟಕ್ಕೆ ಸಮಸ್ಯೆ ತಂದೊಡ್ಡಬಲ್ಲ ಬ್ಯಾಕ್ಟೀರಿಯಾಗಳನ್ನು ನಮ್ಮ ಬಾಯಿಯಲ್ಲಿರುವ ಸಲೈವಾ ತಡೆಯುವ ಕೆಲಸ ಮಾಡುತ್ತದೆ. ನೀರನ್ನು ನಾವು ಕಡಿಮೆ ಕುಡಿದಾಗ ಬಾಯಿಯಲ್ಲಿರುವ ಸಲೈವಾ ಪ್ರಮಾಣ ಕೂಡ ಕಡಿಮೆಯಾಗಿ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ತಲೆನೋವು : ನಾವು ನೀರನ್ನು ಕಡಿಮೆ ಕುಡಿಯೋದ್ರಿಂದ ನಮ್ಮ ದೇಹದಲ್ಲಿನ ರಕ್ತ ಸಂಚಾರ ಕೂಡ ಕಡಿಮೆಯಾಗುತ್ತದೆ. ಇದರಿಂದ ನಮ್ಮ ಮೆದುಳಿಗೆ ಸಾಕಷ್ಟು ಆಮ್ಲಜನಕ ತಲುಪುವುದಿಲ್ಲ. ಪರಿಣಾಮ ತಲೆನೋವು ಹಾಗೂ ಒಂದು ರೀತಿಯ ಆಲಸ್ಯ ಕಾಣಿಸಿಕೊಳ್ಳುತ್ತದೆ.

ಆಯಾಸದ ಅನುಭವವಾಗುವುದು : ನೀವು ಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ನಿಮ್ಮ ದೇಹ ರಕ್ತದಲ್ಲಿರುವ ನೀರನ್ನು ತೆಗೆದುಕೊಂಡು ತನ್ನ ಅಗತ್ಯ ಪೂರೈಸಿಕೊಳ್ಳುತ್ತದೆ. ಪರಿಣಾಮ ನಿಮ್ಮ ಹೃದಯ ತುಂಬಾ ವೇಗವಾಗಿ ಕೆಲಸ ಮಾಡಲಾರಂಭಿಸುತ್ತದೆ. ಅದರಿಂದ ನಿಮಗೆ ಆಯಾಸ ಕಾಣಿಸಿಕೊಳ್ಳುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read