ಹೀಗೆ ಮಾಡಿದ್ರೆ ಕೆಂಪಗಾಗುತ್ತೆ ‘ಮೆಹಂದಿ’ ಬಣ್ಣ…!

ಕೈಗಳ ಅಂದ ಹೆಚ್ಚಿಸಲು ಮಾತ್ರ ಮೆಹಂದಿ ಬಳಸುವುದಿಲ್ಲ. ಇದನ್ನು ಶುಭ ಸಂಕೇತವೆಂದು ನಂಬಲಾಗಿದೆ. ನಮ್ಮ ದೇಶದಲ್ಲಿ ಯಾವುದೇ ಹಬ್ಬ, ಸಮಾರಂಭವಿರಲಿ. ಕೈಗೆ ಮೆಹಂದಿ ಬಣ್ಣವಿಲ್ಲದೆ ಅದು ಪೂರ್ತಿಯಾಗುವುದಿಲ್ಲ. ಚೆಂದದ ಬಟ್ಟೆ, ಸುಂದರ ಮೇಕಪ್ ಜೊತೆ ಕೈ ಅಂದ ಹೆಚ್ಚಿಸಲು ಮೆಹಂದಿ ಇರಬೇಕು.

ಮೆಹಂದಿ ಹಚ್ಚಿದ್ರೆ ಸಾಕಾಗೊಲ್ಲ, ಅದು ಸರಿಯಾಗಿ ಬಣ್ಣ ಬಿಡಬೇಕು. ಎಲ್ಲ ಡಿಸೈನ್ ಸರಿಯಾಗಿ ಮೂಡಬೇಕು. ಕೆಲವೊಮ್ಮೆ ಮೆಹಂದಿ ಹಸಿಯಿರುವಾಗ ಸುಂದರವಾಗಿ ಕಾಣುತ್ತೆ. ಆದ್ರೆ ಬಣ್ಣ ಮಾತ್ರ ಸರಿಯಾಗಿ ಬಂದಿರುವುದಿಲ್ಲ. ಕೆಲವರ ಕೈಗೆ ಮೆಹಂದಿ ಕೇಸರಿಯಾದ್ರೆ ಮತ್ತೆ ಕೆಲವರ ಕೈಗೆ ಮೆಹಂದಿ ಕಪ್ಪಾಗಿಬಿಡುತ್ತದೆ. ಹಾಗಾಗಿ ಮೆಹಂದಿ ಹಚ್ಚಿಸಿಕೊಳ್ಳುವಾಗ ಕೆಲವೊಂದರ ಬಗ್ಗೆ ಗಮನ ನೀಡಿದ್ರೆ ಬಣ್ಣ ಸರಿಯಾಗಿ ಮೂಡುತ್ತದೆ.

ಮೆಹಂದಿ ಹಚ್ಚಿದ ನಂತ್ರ ತಾಳ್ಮೆ ವಹಿಸಬೇಕಾಗುತ್ತದೆ. ಕನಿಷ್ಠ ಐದರಿಂದ ಆರು ಗಂಟೆಗಳ ಕಾಲ ಗೋರಂಟಿ ಹಚ್ಚಿ ಹಾಗೆ ಬಿಡಬೇಕು.

ನಿಂಬು ಹಾಗೂ ಸಕ್ಕರೆ ಮಿಶ್ರಣ ಕೂಡ ಗೋರಂಟಿ ಬಣ್ಣ ಬಿಡಲು ಸಹಾಯ ಮಾಡುತ್ತದೆ. ವಾಸ್ತವವಾಗಿ ಈ ಮಿಶ್ರಣದಿಂದ ಬಹಳ ಹೊತ್ತು ಮೆಹಂದಿ ಹಸಿಯಾಗಿರುತ್ತದೆ. ಹಾಗೆ ಮೆಹಂದಿ ಕೆಂಪಾಗಲು ನೆರವಾಗುತ್ತದೆ.

ಬಾಣಲೆಗೆ ಲವಂಗದ ಮೊಗ್ಗನ್ನು ಹಾಕಿ ಬಿಸಿ ಮಾಡಿ, ಆ ಉಗಿಯಲ್ಲಿ ನಿಮ್ಮಕೈ ಇಡಿ. ಇದು ಮೆಹಂದಿ ಬಣ್ಣ ಬಿಡಲು ನೆರವಾಗುತ್ತದೆ.

ಮೆಹಂದಿಯನ್ನು ತೆಗೆಯಲು ನೀರನ್ನು ಬಳಸಬೇಡಿ. 10-12 ಗಂಟೆಗಳ ಕಾಲ ನೀರಿನಿಂದ ದೂರ ಇರುವುದು ಒಳ್ಳೆಯದು. ಸೋಪ್ ಬಳಕೆ ಬೇಡವೇ ಬೇಡ. ಹಾಗೆ ಸಾಸಿವೆ ಎಣ್ಣೆಯಿಂದ ಕೈ ತೊಳೆಯುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read