ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ದೂರವಾಗುತ್ತೆ ಸಮಸ್ಯೆ

ಮನೆಯ ವಾಸ್ತು ಸರಿಯಾಗಿದ್ದರೆ ಆರೋಗ್ಯ, ಐಶ್ವರ್ಯ, ಸುಖ, ಸಂತೋಷದಲ್ಲಿ ಯಾವುದೇ ಸಮಸ್ಯೆ ಕಾಡುವುದಿಲ್ಲ. ಮನೆಯ ಮುಖ್ಯ ಬಾಗಿಲು ಕೂಡ ವಾಸ್ತು ಪ್ರಕಾರ ಇರಬೇಕು. ಕೆಲವೊಂದು ಸಣ್ಣಪುಟ್ಟ ಕೆಲಸಗಳ ಮೂಲಕ ನಾವು ವಾಸ್ತು ದೋಷವನ್ನು ನಿವಾರಿಸಬಹುದು. ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವ ಕೆಲಸ ಮನೆಯನ್ನು ನಕಾರಾತ್ಮಕ ಶಕ್ತಿ ಪ್ರವೇಶ ಮಾಡದಂತೆ ನೋಡಿಕೊಳ್ಳುತ್ತದೆ.

ಮನೆಯ ಮುಖ್ಯ ದ್ವಾರ ಬಹಳ ಮಹತ್ವದ ಸ್ಥಳವಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ಮನೆಯ ಮುಖ್ಯ ದ್ವಾರದ ಬಳಿ ನೀರನ್ನು ಸಿಂಪಡಿಸಬೇಕು. ಸಾಧ್ಯವಾದ್ರೆ ಗಂಗಾ ಜಲವನ್ನು ಹಾಕಬೇಕು. ಇದ್ರಿಂದ ಮನೆಯನ್ನು ಯಾವುದೇ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲ.

ಮನೆಯ ಮುಖ್ಯ ದ್ವಾರದ ಮುಂದೆ ಸ್ವಸ್ತಿಕ್ ಚಿಹ್ನೆ ಬಿಡಿಸಬೇಕು. ಅರಿಶಿನದಲ್ಲಿ ಸ್ವಸ್ತಿಕ್  ಬಿಡಿಸುವುದು ಒಳ್ಳೆಯದು. ಸೂರ್ಯೋದಯಕ್ಕಿಂತ ಮೊದಲೇ ಈ ಕೆಲಸವನ್ನು ಮಾಡಬೇಕಾಗುತ್ತದೆ. ಇದ್ರಿಂದ ಲಕ್ಷ್ಮಿ ಒಲಿಯುತ್ತಾಳೆಂಬ ನಂಬಿಕೆಯೂ ಇದೆ.

ಮನೆಯ ಮುಖ್ಯ ದ್ವಾರದಲ್ಲಿ ಗಣೇಶನ ಚಿತ್ರವಿರಬೇಕು. ಇದು ಮನೆಗೆ ಶುಭಕರವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಮನೆಯ ಮುಖ್ಯ ದ್ವಾರಕ್ಕೆ ಅಶೋಕ ಅಥವಾ ಮಾವಿನ ಎಲೆಗಳ ತೋರಣವನ್ನು ಮಾಡಬೇಕು. ಬಿಲ್ವಪತ್ರೆ ಮಾಲೆ ಮಾಡಿ ಕೂಡ ನೀವು ತೋರಣ ಮಾಡಬಹುದು. ಇದ್ರಿಂದ ಆರ್ಥಿಕ ಸಮಸ್ಯೆ ಕೂಡ ದೂರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read