ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲಿದ್ದರೆ ಇಲ್ಲಿದೆ ಲಾಭದಾಯಕ ಬ್ಯುಸಿನೆಸ್ ಐಡಿಯಾ

ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲಿದ್ದರೆ ಲಾಭದಾಯಕ ಬ್ಯುಸಿನೆಸ್ ಐಡಿಯಾ ಇಲ್ಲಿದೆ. ಕಡಿಮೆ ಬಂಡವಾಳ ತೊಡಗಿಸಿ ಕೈತುಂಬಾ ಆದಾಯ ಗಳಿಸುವ ಬ್ಯುಸಿನೆಸ್ ಗಳಲ್ಲಿ ಇದು ಒಂದು. ಅಲ್ಪ ಹೂಡಿಕೆಯೊಂದಿಗೂ ನೀವು ಮೊಲ ಕೃಷಿ ವ್ಯವಹಾರವನ್ನು ಪ್ರಾರಂಭಿಸಬಹುದು.

ಈ ವ್ಯವಹಾರವು ಲಾಭದಾಯಕ. ಮೊಲದ ಮಾಂಸಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಹಾಗೆ ಮೊಲದ ಕೂದಲಿಗೂ ಬೇಡಿಕೆ ಹೆಚ್ಚಿದೆ. ಸಣ್ಣ ಪ್ರಮಾಣದಲ್ಲಿ ಮೊಲ ಸಾಕಾಣೆ ಶುರು ಮಾಡಿ ನೀವು ನಿಯಮಿತ ಆದಾಯ ಗಳಿಸಬಹುದು. ಒಂದು ಘಟಕದಲ್ಲಿ ಏಳು ಹೆಣ್ಣು ಮತ್ತು ಮೂರು ಗಂಡು ಮೊಲಗಳಿರುತ್ತವೆ.

 ಗಂಡು ಮತ್ತು ಹೆಣ್ಣು ಮೊಲಗಳು ಸುಮಾರು 6 ತಿಂಗಳ ನಂತರ ಸಂತಾನೋತ್ಪತ್ತಿಗೆ ಸಿದ್ಧವಾಗುತ್ತವೆ. ಹೆಣ್ಣು ಮೊಲವು ಒಂದು ಸಮಯದಲ್ಲಿ 6 ರಿಂದ 7 ಮರಿಗಳಿಗೆ ಜನ್ಮ ನೀಡುತ್ತದೆ. ಹೆಣ್ಣು ಮೊಲದ ಗರ್ಭಧಾರಣೆಯ ಅವಧಿ 30 ದಿನಗಳು. ಮುಂದಿನ 45 ದಿನಗಳಲ್ಲಿ ಮರಿ ಮೊಲದ ತೂಕ 2 ಕೆ.ಜಿ. ದಾಟಿದ್ರೆ ಮಾರಾಟ ಮಾಡಬಹುದು. ಪ್ರಾಂಚೈಸಿ ಮೂಲಕವೂ ನೀವು ಬ್ಯುಸಿನೆಸ್ ಶುರು ಮಾಡಬಹುದು. ಮೊಲ ಸಾಕಣೆ ಬಗ್ಗೆ ಎಲ್ಲ ರೀತಿಯ ತರಬೇತಿ ಲಭ್ಯವಿದೆ. ಸೂಕ್ತ ತರಬೇತಿ ನಂತ್ರ ಬ್ಯುಸಿನೆಸ್ ಶುರು ಮಾಡಿದ್ರೆ ಲಾಭಕರ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read