ʼಪಕ್ಷಿʼಗಳಿಗೆ ನೀರಿಡುವವರು ನೀವಾಗಿದ್ದರೆ ತಿಳಿಯಿರಿ ಈ ವಿಷಯ

ಮನೆಯಲ್ಲಿ ಶಾಂತಿಯಿರಲಿ ಎಂದು ಪ್ರತಿಯೊಬ್ಬರು ಬಯಸ್ತಾರೆ. ಮನೆಯಲ್ಲಿ ಎಲ್ಲರೂ ಆರೋಗ್ಯಕರವಾಗಿರಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಮನೆಯ ಮೇಲೆ ಪಕ್ಷಿಗಳಿಗೆ ನೀರಿಡುವುದ್ರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಜೊತೆಗೆ ವಾಸ್ತುವಿಗೆ ಸಂಬಂಧಿಸಿ ದೋಷ ನಿವಾರಣೆಯಾಗುತ್ತದೆ.

ಮನೆಯ ಟೆರೆಸ್ ಮೇಲೆ ನೀರು ಹಾಗೂ ಧಾನ್ಯವನ್ನು ಹಾಕಿಡಬೇಕು. ಪಕ್ಷಿಗಳು ಧನಾತ್ಮಕ ಶಕ್ತಿಯನ್ನು ತರುತ್ತವೆ. ನೀರು ಕುಡಿದು ಧನಾತ್ಮಕ ಶಕ್ತಿಯನ್ನು ಹರಡುವುದ್ರಿಂದ ಧನ ಸಂಬಂಧಿ ಸಮಸ್ಯೆ ದೂರವಾಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಜಗಳ, ಗಲಾಟೆಯಾಗುವುದಿಲ್ಲ.

ಪ್ರತಿ ದಿನ ಪಕ್ಷಿಗೆ ನೀರು ಹಾಗೂ ಧಾನ್ಯ ಹಾಕುವುದ್ರಿಂದ ಆರೋಗ್ಯ ಸಮಸ್ಯೆ ಕಾಡುವುದಿಲ್ಲ. ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಕೈನಿಂದಲೇ ಧಾನ್ಯವನ್ನು ಪಕ್ಷಿಗಳಿಗೆ ಹಾಕಬೇಕು. ಇದ್ರ ಜೊತೆ ಮನೆ ಮುಂದೆ ಎಂದೂ ಕನ್ನಡಿ ಹಾಕಬಾರದು. ಮನೆ ಮುಂದೆ ತುಳಸಿ ಗಿಡವನ್ನು ಬೆಳೆಸಬೇಕು. ಪ್ರತಿ ದಿನ ತುಳಸಿಯ ಎಲೆಯನ್ನು ಜೇನು ತುಪ್ಪದ ಜೊತೆ ಸೇವನೆ ಮಾಡಿದ್ರೆ ಅನಾರೋಗ್ಯ ಸಮಸ್ಯೆ ಕಾಡುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read