ಒದ್ದೆ ಕೂದಲಲ್ಲಿ ನಿದ್ದೆ ಮಾಡೋ ಅಭ್ಯಾಸ ನಿಮಗಿದ್ರೆ ಓದಿ ಈ ಸ್ಟೋರಿ

ಕೆಲವರು ಬೆಳಗ್ಗೆ ತಲೆಸ್ನಾನ ಮಾಡುವ ಬದಲು ರಾತ್ರಿ ತಲೆಸ್ನಾನ ಮಾಡುವ ಅಭ್ಯಾಸವನ್ನ ಹೊಂದಿರ್ತಾರೆ. ಅದರಲ್ಲೂ ಮೆಟ್ರೋ ಸಿಟಿಗಳಲ್ಲಿ ವಾಸಿಸುವ ಮಹಿಳೆಯರಲ್ಲಿ ಈ ಅಭ್ಯಾಸ ಜಾಸ್ತಿ.

ರಾತ್ರಿ ಹೊತ್ತು ತಲೆ ಸ್ನಾನ ಮಾಡೋದ್ರಿಂದ ಸಮಯ ಉಳಿತಾಯವಾಗುತ್ತೆ ಅನ್ನೋದು ನಿಮ್ಮ ಯೋಚನೆಯಾಗಿರಬಹುದು. ಆದರೆ ನಿಮ್ಮ ಈ ಅಭ್ಯಾಸದಿಂದ ಕೂದಲಿನ ಆರೋಗ್ಯ ಹಾಳಾಗಲಿದೆ.

ರಾತ್ರಿ ಹೊತ್ತು ತಲೆ ಸ್ನಾನ ಮಾಡಿದ ಬಳಿಕ ಅನೇಕರು ತಮ್ಮ ಕೂದಲನ್ನೇ ಸರಿಯಾಗಿ ಒಣಗಿಸಿಕೊಳ್ಳದೇ ಮಲಗಿಬಿಡ್ತಾರೆ. ಒದ್ದೆ ಕೂದಲೂ ಬೇಗನೇ ಸಿಕ್ಕಾಗೋದ್ರಿಂದ ಬೆಳಗ್ಗೆ ಎದ್ದು ತಲೆ ಬಾಚುವ ವೇಳೆ ಸಿಕ್ಕಾಪಟ್ಟೆ ಕೂದಲು ಉದುರುತ್ತದೆ.

ಅಲ್ಲದೇ ಒದ್ದೆ ಕೂದಲನ್ನ ಇಟ್ಕೊಂಡು ಮಲಗೋದ್ರಿಂದ ಹೊಟ್ಟಿನ ಸಮಸ್ಯೆ ಹಾಗೂ ಕೂದಲು ಉದುರುವ ಸಮಸ್ಯೆ ಹೆಚ್ಚಾಗಲಿದೆ. ತೇವಾಂಶದಿಂದಾಗಿ ಫಂಗಲ್​ ಸಮಸ್ಯೆ ಕೂಡ ಕಾಣಿಸಿಕೊಳ್ಳಲಿದೆ.

ಅಲ್ಲದೇ ಒದ್ದೆ ಕೂದಲಲ್ಲಿ ಮಲಗೋದ್ರಿಂದ ತಲೆನೋವು ಕೂಡ ಶುರುವಾಗುತ್ತೆ. ಅದು ಮಾತ್ರವಲ್ಲದೇ ಶೀತ, ಅಲರ್ಜಿ ಹಾಗೂ ತಲೆಭಾರ ಉಂಟಾಗಲಿದೆ. ತಲೆ ಸ್ನಾನ ಮಾಡೋದ್ರಿಂದ ತಲೆಯೇನೋ ತಂಪಾಗುತ್ತೆ. ಆದರೆ ನಮ್ಮ ದೇಹ ಉಷ್ಣವನ್ನ ಹೊಂದಿರುತ್ತೆ. ಈ ಅಸಮತೋಲನದಿಂದಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತೆ.

ಕೆಲವೊಮ್ಮೆ ರಾತ್ರಿ ತಲೆ ಸ್ನಾನ ಮಾಡಲೇಬೇಕಾದ ಅನಿವಾರ್ಯ ಬಂದು ಬಿಡುತ್ತೆ. ಅಂತಹ ಸಂದರ್ಭದಲ್ಲಿ ಒಳ್ಳೆಯ ಗುಣಮಟ್ಟದ ಸೇರಂ ಹಾಗೂ ಕಂಡಿಷನರ್​ಗಳನ್ನ ಬಳಕೆ ಮಾಡಿ. ಮಲಗುವ ಮುನ್ನ ಆದಷ್ಟು ಕೂದಲನ್ನ ಒಣಗಿಸೋಕೆ ಪ್ರಯತ್ನಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read