ದುಶ್ಚಟಗಳಿಗೆ ದಾಸರಾಗಿದ್ರೆ ಓದಿ ಈ ಸುದ್ದಿ

ಇಂದಿನ ಯುವ ಜನಾಂಗ ಕುಡಿತ, ಸಿಗರೇಟು, ತಂಬಾಕು ಸೇವನೆ ಸೇರಿದಂತೆ ಹಲವು ದುಶ್ಚಟಗಳ ದಾಸರಾಗಿ ಪರಿತಪಿಸುತ್ತಿದೆ. ಮೊದಲು ಶೋಕಿಗೆಂದು ಆರಂಭವಾಗುವ ಈ ಚಟಗಳು ಬಳಿಕ ಅದರಿಂದ ಹೊರ ಬಾರದಂತೆ ಆಕ್ರಮಿಸಿಕೊಳ್ಳುತ್ತವೆ. ಇದರಿಂದಾಗಿ ಆರೋಗ್ಯ, ಮಾನಸಿಕ ಸ್ಥಿತಿಗತಿಗಳು ಹಾಳಾಗುತ್ತದಲ್ಲದೇ ಆರ್ಥಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಯಾವುದೇ ಒಂದು ದುಶ್ಚಟದಿಂದ ಹೊರ ಬರಲು ದೃಢ ನಿರ್ಧಾರ ಬಹು ಮುಖ್ಯವಾಗುತ್ತದೆ. ಈ ದುಶ್ಚಟಗಳಿಂದ ಆಗುತ್ತಿರುವ ಹಾನಿ ಕುರಿತು ಸಮಾಧಾನಚಿತ್ತವಾಗಿ ಕುಳಿತು ಯೋಚಿಸಿ ಬಳಿಕ ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಚಟವನ್ನು ತ್ಯಜಿಸಲು ತೆಗೆದುಕೊಂಡಿರುವ ನಿರ್ಧಾರದ ಕುರಿತು ಅತ್ಮೀಯರಾಗಿರುವವರೊಂದಿಗೆ ಹೇಳಿಕೊಂಡರೆ ಉತ್ತಮ. ಒಂದೊಮ್ಮೆ ಮತ್ತೆ ಆ ಚಟ ಮಾಡುವ ವೇಳೆ ಅವರು ಗಮನಿಸಿಯಾರೆಂಬ ಅಳುಕಿಗಾದರೂ ಅದನ್ನು ತ್ಯಜಿಸುತ್ತಾರೆ. ದುಶ್ಚಟ ತ್ಯಜಿಸಿದ ಬಳಿಕ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಮುಖ್ಯವಾಗುತ್ತದೆ. ಪುಸ್ತಕ ಓದುವುದು, ಸಂಗೀತ ಕೇಳುವುದು, ಧ್ಯಾನ, ಯೋಗ ಮೊದಲಾದ ಕಡೆ ಗಮನ ಹರಿಸುವುದು ಸೂಕ್ತ.

ಈ ಚಟದಿಂದ ಆಗುತ್ತಿರುವ ಆರ್ಥಿಕ ಹಾನಿಯ ಕುರಿತು ಲೆಕ್ಕ ಹಾಕಿ ಆ ಚಟವನ್ನು ತ್ಯಜಿಸಿದ ಬಳಿಕ ಉಳಿತಾಯವಾಗುತ್ತಿರುವ ಹಣವನ್ನು ಒಂದೆಡೆ ಕೂಡಿಡುತ್ತಾ ಬನ್ನಿ. ಆ ಮೊತ್ತವನ್ನು ತಿಂಗಳ ಬಳಿಕ ನೋಡಿದರೆ ಇದುವರೆಗೂ ಚಟಕ್ಕಾಗಿ ಸುರಿದ ಹಣದ ಕಾರಣಕ್ಕಾಗಿ ಪಶ್ಚಾತಾಪವಾಗುತ್ತದೆ. ಉಳಿತಾಯವಾಗಿರುವ ಈ ಹಣದಲ್ಲಿ ಕುಟುಂಬದವರನ್ನು ವಾರಾಂತ್ಯದ ದಿನಗಳಂದು ಹೊರಗಡೆ ಕರೆದುಕೊಂಡು ಹೋಗಿ ಊಟ ಮಾಡಿ. ಇದರಿಂದ ಅವರುಗಳಿಗೂ ಸಂತೋಷವಾಗುತ್ತದೆ. ನಿಮಗೂ ಆತ್ಮ ತೃಪ್ತಿ ದೊರೆಯುತ್ತದೆ. ಇನ್ನೇಕೆ ತಡ ಈಗಿನಿಂದಲೇ ದುಶ್ಚಟಗಳಿಂದ ಹೊರ ಬರಲು ಪ್ರಯತ್ನ ಆರಂಭಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read