ಪ್ರತಿ ದಿನ ಇದನ್ನು ಹಚ್ಚಿದ್ರೆ ಮುಖದ ಮೇಲಿನ ಕಪ್ಪು ಕಲೆ ಮಂಗಮಾಯ…!

ಮುಖದ ಮೇಲೆ ಒಂದು ಕಪ್ಪು ಮಚ್ಚೆಯಿದ್ರೆ ಅದು ಸೌಂದರ್ಯವನ್ನು ವೃದ್ಧಿಸುತ್ತದೆ. ಆದ್ರೆ ಮುಖವೆಲ್ಲ ಕಲೆಯಾದ್ರೆ ಸೌಂದರ್ಯ ಹಾಳಾಗುತ್ತದೆ. ಕಲೆ ಹೋಗಲಾಡಿಸಿ ಸುಂದರ ಮುಖಕ್ಕಾಗಿ ಜನರು ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಅದ್ರ ಬದಲು ದಿನದಲ್ಲಿ 5 ನಿಮಿಷ ಈ ಮನೆ ಔಷಧಿ ಬಳಸಿದ್ರೆ ಮುಖ ಸುಂದರವಾಗಿ, ಆಕರ್ಷಕವಾಗಿ ಕಾಣುತ್ತದೆ.

ಮೂಲಂಗಿ : ಮುಖದ ಮೇಲಿರುವ ಕಪ್ಪು ಕಲೆಗಳನ್ನು ಮೂಲಂಗಿ ದೂರ ಮಾಡುತ್ತದೆ. ಪ್ರತಿ ದಿನ ಮೂಲಂಗಿ ರಸವನ್ನು ಮುಖಕ್ಕೆ ಹಚ್ಚಿ. ಕೆಲ ಸಮಯ ಬಿಟ್ಟು ಮುಖ ತೊಳೆಯಿರಿ.

ಮಜ್ಜಿಗೆ : ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಮ್ಲವಿರುತ್ತದೆ. ಇದು ಕಲೆಗಳನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಇದು ಪಿಗ್ಮೆಂಟೇಶನ್ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.

ನಿಂಬೆ ರಸ: ನಿಂಬೆ ರಸದಲ್ಲಿ ಸಿಟ್ರಿಕ್ ಆಮ್ಲವಿರುತ್ತದೆ. ನಿಂಬೆ ರಸವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿದ್ರೆ ಮುಖ ಸ್ವಚ್ಛವಾಗಿ ಕಪ್ಪು ಕಲೆ ಮಾಯವಾಗುತ್ತದೆ.

ಅಲೋವೇರಾ: ಮೊದಲು ಅಲೋವೇರಾ ರಸಕ್ಕೆ ನಿಂಬೆ ರಸ, ಮಜ್ಜಿಗೆಯನ್ನು ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ.

ಸೇಬು : ಆಪಲನ್ನು ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ಮುಖವನ್ನು ಸ್ವಚ್ಛಗೊಳಿಸಿ. ವಾರಕ್ಕೆ 2-3 ಬಾರಿ ಹೀಗೆ ಮಾಡಿದ್ರೆ ಮುಖದ ಕಲೆ ಮಾಯವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read