ʼಈ ಕಲಾಕೃತಿʼ ನಿಮ್ಮ ಮನೆಯಲ್ಲಿದ್ದರೆ ನಿಮ್ಮನ್ನು ಬಿಡದು ʼಅದೃಷ್ಟʼ…..!

ಮನೆ ಅಂದ ಕಾಣಬೇಕು ಅಂತಾ ಸಾಕಷ್ಟು ಕಲಾಕೃತಿಗಳನ್ನು ಇಡುತ್ತೇವೆ. ಇದು ಮನೆಯ ಅಂದವನ್ನು ಹೆಚ್ಚಿಸೋದಂತು ನಿಜ. ಆದರೆ ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಕಲಾಕೃತಿಗಳಿಗೂ ಅದರದ್ದೇ ಆದ ಸ್ಥಾನ ಹಾಗೂ ದಿಕ್ಕುಗಳಿವೆ. ಈ ದಿಕ್ಕಿನ ಲೆಕ್ಕಾಚಾರ ತಪ್ಪಿದಲ್ಲಿ ನಿಮಗೆ ಆಪತ್ತು ಆಗೋದಂತೂ ಗ್ಯಾರಂಟಿ..!

ಚೀನಾ ವಾಸ್ತು ಶಾಸ್ತ್ರದ ಪ್ರಕಾರ ಡ್ರ್ಯಾಗನ್​ ಕಲಾಕೃತಿಯನ್ನು ಶಕ್ತಿಯ ಸಂಕೇತ ಎಂದು ನಂಬಲಾಗಿದೆ. ಅಲ್ಲದೇ ಈ ಕಲಾಕೃತಿಯು ಅದೃಷ್ಟವನ್ನು ತಂದುಕೊಡುತ್ತೆ ಎಂಬ ಮಾತು ಕೂಡ ಇದೆ. ಹೀಗಾಗಿ ಮನೆಯಲ್ಲಿ ಡ್ರ್ಯಾಗನ್​ ಫೋಟೋ ಅಥವಾ ಮೂರ್ತಿಯನ್ನು ಇಡೋದು ಶುಭಕರ ಎಂಬ ನಂಬಿಕೆ ಇದೆ.

ಆದರೆ ಡ್ರ್ಯಾಗನ್ ಕಲಾಕೃತಿಯನ್ನು ಆಯ್ಕೆ ಮಾಡುವ ಮುನ್ನ ನೀವು ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇಡಲೇಬೇಕು. ನೀವು ಮರದಿಂದ, ಮಣ್ಣಿನಿಂದ ಮಾಡಿದ ಅಥವಾ ಸ್ಪಟಿಕದ​ ಡ್ರ್ಯಾಗನ್​ಗಳನ್ನು ಖರೀದಿಸಿ ಮನೆಯಲ್ಲಿ ಇಡಬಹುದು.ಆದರೆ ಚಿನ್ನದಿಂದ ಮಾಡಿದ ಡ್ರ್ಯಾಗನ್​ ಮೂರ್ತಿಯು ಶುಭಕರವಲ್ಲ.
ಮಣ್ಣಿನ ಹೂದಾನಿಯ ಮೇಲೆ ರಚಿಸುವ ಹಸಿರು ಬಣ್ಣದ ಡ್ರ್ಯಾಗನ್​ಗಳು ಹೆಚ್ಚು ಶುಭದಾಯಕ ಎಂಬ ನಂಬಿಕೆ ಇದೆ. ಇದನ್ನು ನೀವು ಯಾರಿಗಾದರೂ ಉಡುಗೊರೆಯಾಗಿ ನೀಡಬಹುದು. ಇದನ್ನು ಹೊರತುಪಡಿಸಿ ಡ್ರ್ಯಾಗನ್​ ಫೋಟೋವನ್ನು ನೀವು ಅಳವಡಿಸಬಹುದು. ಜೋಡಿ ಡ್ರ್ಯಾಗನ್​ಗಳು ಇನ್ನೂ ಶುಭಕರ ಎಂಬ ನಂಬಿಕೆಯಿದೆ.

ಇದಿಷ್ಟು ಡ್ರ್ಯಾಗನ್​ ಖರೀದಿ ಮಾತಾಯ್ತು. ಡ್ರ್ಯಾಗನ್​ಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುವುದಕ್ಕೂ ನಿಯಮಗಳಿವೆ. ಡ್ರ್ಯಾಗನ್​ಗಳನ್ನು ಎಂದಿಗೂ ಎತ್ತರದ ಸ್ಥಳಗಳಲ್ಲಿ ಅಥವಾ ಬೆಡ್​ರೂಮ್​ನಲ್ಲಿ ಇಡುವಂತಿಲ್ಲ. ಇದರಿಂದ ಮಾನಸಿಕ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಒಂದೊಂದು ಮಾದರಿಯ ಡ್ರ್ಯಾಗನ್​ ಕಲಾಕೃತಿಗೆ ಒಂದೊಂದು ರೀತಿಯ ದಿಕ್ಕುಗಳಿವೆ.

ಮರದಿಂದ ನಿರ್ಮಿಸಲಾದ ಡ್ರ್ಯಾಗನ್ ಆಗ್ನೇಯ ಇಲ್ಲವೇ ಪೂರ್ವ ದಿಕ್ಕಿನಲ್ಲಿ ಇರಿಸಬಹುದು. ಸ್ಪಟಿಕದ ಡ್ರ್ಯಾಗನ್​ಗಳನ್ನು ಆಗ್ನೇಯ, ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬಹುದು. ಮಕ್ಕಳು ಓದುವ ಮೇಜಿನ ಮೇಲೂ ಡ್ರ್ಯಾಗನ್​ ಇಡಬಹುದು. ಡ್ರ್ಯಾಗನ್​ ಜೋಡಿಯನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಹೆಚ್ಚು ಸೂಕ್ತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read