ಈ ತರಕಾರಿಗಳನ್ನು ಹಸಿಯಾಗಿ ತಿಂದರೆ ಕಾಡುತ್ತೆ ಸಮಸ್ಯೆ..…!

ನಿಯಮಿತವಾಗಿ ತರಕಾರಿ ತಿನ್ನುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬೆಳಗಿನ ಉಪಹಾರದ ಜೊತೆಗೆ, ಮಧ್ಯಾಹ್ನದ ಊಟದೊಂದಿಗೆ ಅನೇಕರು ಹಸಿ ತರಕಾರಿಗಳನ್ನು ತಿನ್ನುತ್ತಾರೆ. ಸಲಾಡ್‌ ಸೇವಿಸಲು ಇಷ್ಟಪಡುತ್ತಾರೆ. ಆದರೆ ಕೆಲವೊಂದು ತರಕಾರಿಗಳನ್ನು ಅಪ್ಪಿತಪ್ಪಿಯೂ ಹಸಿಯಾಗಿ ತಿನ್ನಬಾರದು. ಅವುಗಳನ್ನು ಬೇಯಿಸಿಯೇ ತಿನ್ನಬೇಕು.

ಬದನೆಕಾಯಿ – ಬದನೆಕಾಯಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ತರಕಾರಿ. ಆದರೆ ಇದನ್ನು ಎಂದಿಗೂ ಹಸಿಯಾಗಿ ತಿನ್ನಬಾರದು. ಹಸಿಯಾಗಿ ತಿಂದರೆ ವಾಂತಿ ಮತ್ತು ಹೊಟ್ಟೆನೋವು ಕಾಣಿಸಿಕೊಳ್ಳಬಹುದು.

ಆಲೂಗಡ್ಡೆ – ಬಹಳ ರುಚಿಕರ ತರಕಾರಿಗಳಲ್ಲೊಂದಾದ ಆಲೂಗಡ್ಡೆಯನ್ನು ಬೇಯಿಸಿಯೇ ತಿನ್ನಬೇಕು. ಹಸಿಯಾಗಿ ತಿಂದರೆ ವಾಂತಿ, ಗ್ಯಾಸ್ಟ್ರಿಕ್‌ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗುತ್ತವೆ.

ಅಣಬೆ – ಅನೇಕರು ಸಲಾಡ್ ರೂಪದಲ್ಲಿ ಅಣಬೆಗಳನ್ನು ಕಚ್ಚಾ ತಿನ್ನಲು ಇಷ್ಟಪಡುತ್ತಾರೆ. ಆದರೆ ಅಣಬೆಗಳನ್ನು ಹಸಿಯಾಗಿ ತಿನ್ನುವುದರಿಂದ ಚರ್ಮದ ಸಮಸ್ಯೆಗಳು ಬರಬಹುದು. ಹಾಗಾಗಿ ಅಣಬೆಗಳನ್ನು ಬೇಯಿಸಿಯೇ ತಿನ್ನಬೇಕು.

ಪಾಲಕ್‌ ಸೊಪ್ಪು – ಪಾಲಕ್‌ ಸೊಪ್ಪನ್ನು ಹಸಿಯಾಗಿ ತಿನ್ನುವಂತಿಲ್ಲ. ಕಚ್ಚಾ ತಿಂದರೆ ಅಜೀರ್ಣದಂತಹ ಸಮಸ್ಯೆಗಳಾಗುತ್ತವೆ. ಯಾವಾಗಲೂ ಬೇಯಿಸಿಯೇ ತಿನ್ನಿ.

ಬೀನ್ಸ್‌ – ಬೀನ್ಸ್‌ ಕೂಡ ಜನರು ಬಹಳ ಇಷ್ಟಪಡುವಂತಹ ತರಕಾರಿ. ಇದನ್ನು ಹಸಿಯಾಗಿ ತಿಂದರೆ ಹೊಟ್ಟೆ ಅಪ್ಸೆಟ್‌ ಆಗುತ್ತದೆ. ಹಾಗಾಗಿ ಚೆನ್ನಾಗಿ ಬೇಯಿಸಿಯೇ ತಿನ್ನುವುದು ಸೂಕ್ತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read