ಈ ವಸ್ತುಗಳನ್ನು ಹಾಸಿಗೆ ಕೆಳಗಡೆ ಇಟ್ಟರೆ ಕಳೆದು ಹೋಗುತ್ತೆ ಹಣ ಮತ್ತು ಸಮೃದ್ಧಿ !

ಪ್ರತಿಯೊಬ್ಬರೂ ಶ್ರೀಮಂತರಾಗುವ ಕನಸು ಕಾಣುತ್ತಾರೆ. ಆದರೆ  ಈ ಆಸೆ ಎಲ್ಲರ ಪಾಲಿಗೂ ಈಡೇರುವುದಿಲ್ಲ. ಕಠಿಣ ಪರಿಶ್ರಮದ ಹೊರತಾಗಿಯೂ ಅನೇಕರು ಬಡತನದಲ್ಲೇ ಇರುತ್ತಾರೆ. ಇದರ ಹಿಂದಿರುವ ಕಾರಣ ಅವರ ಶ್ರಮದ ಕೊರತೆಯಲ್ಲ, ವಾಸ್ತುವಿನಲ್ಲಿ ನಾವು ಎಸಗುವ ಪ್ರಮಾದಗಳು. ನಾವು ಮಲಗುವ ಹಾಸಿಗೆಯ ಕೆಳಗೆ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುತ್ತವೆ. ಕುಟುಂಬದ ಸಮೃದ್ಧಿಗೆ ಧಕ್ಕೆ ಬರುತ್ತದೆ.

ಹಾಸಿಗೆಯ ಕೆಳಗೆ ಹಣವನ್ನು ಇಡಬೇಡಿ !

ಸುರಕ್ಷತೆಗಾಗಿ ಅನೇಕ ಜನರು ಹಣವನ್ನು ಹಾಸಿಗೆಯ ಕೆಳಗೆ ಇಡುತ್ತಾರೆ. ಭದ್ರತೆಯ ದೃಷ್ಟಿಯಿಂದ ಇದು ಸರಿ ಎನಿಸಬಹುದು, ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ತಪ್ಪು. ವಾಸ್ತವವಾಗಿ ಹಣವು ಮಾತೆ ಲಕ್ಷ್ಮಿಗೆ ಸಂಬಂಧಿಸಿದೆ. ಹಣವನ್ನು ಹಾಸಿಗೆಯ ಕೆಳಗೆ ಇಡುವುದು ಲಕ್ಷ್ಮಿದೇವಿಗೆ ಅಗೌರವ ಸಲ್ಲಿಸಿದಂತೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಬಡತನ ಬರಬಹುದು.

ಹಾಸಿಗೆಯ ಕೆಳಗಡೆ ಪಾತ್ರೆಗಳನ್ನಿಡುವಂತಿಲ್ಲ !

ಮನೆಯಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಅನೇಕರು ಮಂಚದ ಕೆಳಗೆ ಪಾತ್ರೆಗಳನ್ನು ಇಡುತ್ತಾರೆ. ಈ ರೀತಿ ಮಾಡುವುದು ವಾಸ್ತು ದೃಷ್ಟಿಯಿಂದ ಅಶುಭವೆಂದು ಪರಿಗಣಿಸಲಾಗುತ್ತದೆ. ಉಕ್ಕಿನ ಪಾತ್ರೆಗಳು ಶನಿದೇವರಿಗೆ ಸಂಬಂಧಿಸಿದ್ದು. ಪ್ಲಾಸ್ಟಿಕ್, ಗಾಜು ಮತ್ತು ಮಣ್ಣಿನ ಪಾತ್ರೆಗಳು ರಾಹು-ಕೇತುಗಳಿಗೆ ಸಂಬಂಧಿಸಿವೆ. ಹಾಗಾಗಿ ಪಾತ್ರೆಗಳನ್ನು ನಾವು ಮಲಗುವ ಮಂಚದ ಕೆಳಗಡೆ ಇರಿಸಿದರೆ ಈ ಎಲ್ಲಾ ದೇವರುಗಳ ಅಸಮಾಧಾನವನ್ನು ಎದುರಿಸಬೇಕಾಗುತ್ತದೆ.

ಈ ಸ್ಥಳದಲ್ಲಿ ಆಭರಣಗಳನ್ನು ಇಡಬೇಡಿ !

ಅನೇಕರು ತಮ್ಮ ಆಭರಣಗಳನ್ನು ಕಳ್ಳರು ಮತ್ತು ದರೋಡೆಕೋರರಿಂದ ರಕ್ಷಿಸಲು ಹಾಸಿಗೆಯ ಕೆಳಗೆ ಪೆಟ್ಟಿಗೆಯಲ್ಲಿ ಇಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಈ ವಿಧಾನ ತಪ್ಪು. ಚಿನ್ನದ ಆಭರಣಗಳು ಭಗವಾನ್ ವಿಷ್ಣುವಿಗೆ ನೇರವಾಗಿ ಸಂಬಂಧಿಸಿವೆ. ಹಾಸಿಗೆಯ ಕೆಳಗೆ ಆಭರಣಗಳನ್ನು ಇರಿಸಿದರೆ ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವಿನ ಅಸಮಾಧಾನವನ್ನು ಎದುರಿಸಬೇಕಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read