ಈ ಗಿಡಗಳು ಮನೆಯ ಮುಂದಿದ್ದರೆ ತಪ್ಪುವುದು ಸೊಳ್ಳೆ ಕಾಟ…..!

 

ಸೊಳ್ಳೆಗಳ ಹಾವಳಿ ಈಗಂತೂ ಹೆಚ್ಚೇ. ಇವುಗಳಿಂದ ಕಾಡುವ ಕಾಯಿಲೆ ಒಂದೆರಡಲ್ಲ. ಈ ಕಾರಣಕ್ಕಾಗಿಯೇ ಬಹಳಷ್ಟು ಮಂದಿ ಮಸ್ಕಿಟೋ ಕಾಯಿಲ್, ರಿಪೆಲ್ಲೆಂಟ್‌ಗಳನ್ನು ಬಳಸುತ್ತಾರೆ. ಅವುಗಳ ವಾಸನೆ ಕೂಡ ಆರೋಗ್ಯಕ್ಕೆ ಹಾನಿಕರ.

ಅದರ ಬದಲು ಈ ಗಿಡಗಳನ್ನು ಮನೆಯಲ್ಲಿ ಬೆಳೆಸಿಕೊಂಡರೆ ಸೊಳ್ಳೆಗಳನ್ನು ಓಡಿಸಬಹುದು. ಯಾಕೆಂದರೆ ಈ ಗಿಡಗಳು ಬಿಡುವ ಹೂಗಳು ಮನೆಯೊಳಗೆ ಸೊಳ್ಳೆಗಳು ಬರದಂತೆ ತಡೆಯುತ್ತವೆ.

ತುಳಸಿ

ಇದು ಅನಾರೋಗ್ಯ ಸಮಸ್ಯೆಗಳಷ್ಟೇ ಅಲ್ಲ, ಸೊಳ್ಳೆಗಳನ್ನು ಓಡಿಸುವ ಶಕ್ತಿ ಹೊಂದಿದೆ. ಇವುಗಳ ಹೂವುಗಳು ಸೊಳ್ಳೆಗಳನ್ನು ದೂರ ಓಡಿಸುತ್ತವೆ. ಆದ ಕಾರಣ ತುಳಸಿ ಗಿಡಗಳನ್ನು ಬೆಳೆಸಿಕೊಂಡರೆ ಸೊಳ್ಳೆಗಳಿಂದ ಪಾರಾಗಬಹುದು.

ಲವಂಗ ಗಿಡ

ಲವಂಗ ಗಿಡದ ಎಲೆಗಳಿಂದ ಬರುವ ವಾಸನೆ ಅಷ್ಟೇ ಅಲ್ಲ, ಈ ಗಿಡದ ಹೂವುಗಳು ಸಹ ಸೊಳ್ಳೆಗಳನ್ನು ಓಡಿಸುತ್ತವೆ. ಹೀಗಾಗಿ ಈ ಗಿಡವನ್ನು ಮನೆಯಲ್ಲಿ ಬೆಳೆಸಿಕೊಂಡರೆ ಉಪಯುಕ್ತ. ಲವಂಗ ಎಣ್ಣೆಯನ್ನು ನಿದ್ರಿಸುವ ಮುನ್ನ ಚರ್ಮಕ್ಕೆ ಹಚ್ಚಿಕೊಂಡರೆ ಆ ವಾಸನೆಗೂ ಸೊಳ್ಳೆಗಳು ಹತ್ತಿರ ಸುಳಿಯಲ್ಲ.

ಚೆಂಡು ಹೂವು

ಚೆಂಡು ಹೂವಿನ ಗಿಡಗಳನ್ನು ಮನೆಯಲ್ಲಿ ಬೆಳೆಸಿದರೆ ಸೊಳ್ಳೆಗಳಿಂದ ಪಾರಾಗಬಹುದು. ಚೆಂಡು ಹೂಗಳನ್ನು ಅರೆದು ಚರ್ಮಕ್ಕೆ ಹಚ್ಚಿಕೊಂಡರೆ ಸೊಳ್ಳೆಗಳು ಕಚ್ಚುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read