‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾಡಿಗೆ ದರಿದ್ರ, ಬರ ಬರುತ್ತದೆ’ : H.D ಕುಮಾರಸ್ವಾಮಿ ವಾಗ್ಧಾಳಿ

ರಾಮನಗರ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಾಡಿಗೆ ದರಿದ್ರ ಮತ್ತು ಬರ ಬರುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.

ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ಗ್ರಾಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಾಡಿಗೆ ದರಿದ್ರ ಮತ್ತು ಬರ ಬರುತ್ತದೆ ಎಂಬ ಪ್ರತೀತಿ ಇದೆ, ಈ ವರ್ಷ ಹಾಗೆ ಆಗಿದೆ. ರಾಜ್ಯದಲ್ಲಿ ಬರಗಾಲ ಶುರುವಾಗಿದೆ ಎಂದರು. ಬಿಜೆಪಿ ಸೇರಿದಂತೆ ಯಾರ ಬಗ್ಗೆ ಕೂಡ ನನಗೆ ಮೃದು ಧೋರಣೆ ಇಲ್ಲ, ಅದನ್ನು ಇಟ್ಟುಕೊಂಡು ನಾನು ಏನು ಮಾಡಲಿ ಎಂದು ವಾಗ್ಧಾಳಿ ನಡೆಸಿದರು.

 ವರ್ಗಾವಣೆಗೆ ನಾನು ಲಂಚ ಪಡೆದಿರುವುದು ಸಾಬೀತಾದ್ರೆ ರಾಜಕೀಯ ನಿವೃತ್ತಿ’ : ಮಾಜಿ ಸಿಎಂ HDK ಸವಾಲ್

ನಾನು ಲಂಚ ಪಡೆದಿರುವುದು ಸಾಬೀತಾದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.

ನಾನು ಸದನಲ್ಲಿ ವರ್ಗಾವಣೆ ದಾಖಲೆ ಬಿಡುಗಡೆ ಮಾಡಿದ್ರೆ ನನ್ನ ಅಧಿಕಾರದ ಅವಧಿಯಲ್ಲಿ ಕೋಟಿ ಕೋಟಿ ಹಣ ಪಡೆದಿದ್ದಾರೆ ಎಂದು ದಾಖಲೆ ಬಿಡುಗಡೆ ಮಾಡುತ್ತೀರಾ. ನನ್ನ ಕಾಲದಲ್ಲಿ ನಾನು ಲಂಚ ಪಡೆದಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 2 ತಿಂಗಳಲ್ಲೇ ವರ್ಗಾವಣೆ ದಂಧೆಯಲ್ಲಿ 500 ಕೋಟಿ ವಹಿವಾಟು ನಡೆದಿದೆ ಎಂದು ಹೇಳಿದ್ದಾರೆ.ಪ್ರತಿಯೊಂದು ಇಲಾಖೆಯಲ್ಲಿಯೂ ವರ್ಗವಣೆ ದಂಧೆ ನಡೆಯುತ್ತಿದೆ. ಅಧಿಕಾರಿಯೊಬ್ಬರು ನನಗೆ ಈ ಮಾಹಿತಿ ನೀಡಿದ್ದಾರೆ. ಕೇವಲ 2 ತಿಂಗಳಲ್ಲಿ 500 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎಂದು ತಿಳಿಸಿದ್ದಾರೆ ಎಂದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read