ಶಿರಸಿ: ವಿಧಾನಪರಿಷತ್ ನಲ್ಲಿ ಈಗ ಕಾಂಗ್ರೆಸ್ ಗೆ ಬಹುಮತ ಬಂದರೂ ನನಗೆ ಆತಂಕವಿಲ್ಲ. ಸಭಾಪತಿ ಸ್ಥಾನದಿಂದ ಇಳಿಸಲು ಯತ್ನಿಸಿದರೆ ತಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಸಭಾಪತಿ ಸ್ಥಾನದಿಂದ ಇಳಿಸಲು ಪ್ರಯತ್ನಿಸಿದರೆ ತಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಒಂದು ವರ್ಷ ಅಥವಾ 10 ವರ್ಷ ಸಭಾಪತಿ ಆದರೂ ಅಧಿಕಾರದಿಂದ ಇಳಿದ ಬಳಿಕ ಮಾಜಿ ಎನ್ನುತ್ತಾರೆ. ಈ ಹಿಂದೆ ಡಿ.ಹೆಚ್. ಶಂಕರಮೂರ್ತಿ, ವಿ.ಎಸ್. ಉಗ್ರಪ್ಪ ಅವರನ್ನು ಪಕ್ಷದ ಬಲ ಬದಲಾದಾಗ ಪದಚ್ಯುತಗೊಳಿಸಲಾಗಿತ್ತು. ಈಗ ಕಾಂಗ್ರೆಸ್ ಗೆ ಬಹುಮತ ಬಂದರೂ ನನಗೆ ಆತಂಕವಿಲ್ಲ. ಸಭಾಪತಿ ಸ್ಥಾನದಿಂದ ಇಳಿಸಲು ಯತ್ನಿಸಿದರೆ ತಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.