ನಾರ್ವೇ ಕಡಲಲ್ಲಿ ಹಿಮಯುಗಕ್ಕೆ ಸೇರಿದ ಮಣ್ಣಿನ ಜ್ವಾಲಾಮುಖಿ ಪತ್ತೆ

ಹಿಮಯುಗಕ್ಕೆ ಸೇರಿದ ಜ್ವಾಲಾಮುಖಿಯೊಂದು ಬೇರೆಂಟ್ಸ್ ಸಮುದ್ರದಾಳದಲ್ಲಿ ಸಕ್ರಿಯವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ’ಬೋರಿಲಿಸ್ ಮಡ್ ಜ್ವಾಲಾಮುಖಿ’ ಎಂದು ಕರೆಯಲಾಗುವ ಈ ಜ್ವಾಲಾಮುಖಿ ನಾರ್ವೇ ಕರಾವಳಿಯ ಬಿಯರ್‌ ದ್ವೀಪದಿಂದ 70 ನಾಟಕಲ್ ಮೈಲಿ ದೂರದಲ್ಲಿ 400 ಮೀಟರ್‌ ಆಳದಲ್ಲಿ ಕಂಡು ಬಂದಿದೆ.

ನಾರ್ವೇಯ ಕಡಲಲ್ಲಿ ಕಂಡು ಬಂದ ಎರಡನೇ ಮಡ್ ಜ್ವಾಲಾಮುಖಿ ಇದಾಗಿದೆ. ನಾರ್ವೇಯ ಆರ್ಕ್ಟಿಕ್ ವಿವಿಯ ವಿಜ್ಞಾನಿಗಳು, ಆರ್‌ಇವಿ ಓಷನ್ ಸಹಯೋಗದಲ್ಲಿ ಈ ಭೂವೈಜ್ಞಾನಿಕ ವಿಸ್ಮಯವನ್ನು ಕಂಡುಕೊಂಡಿದ್ದಾರೆ.

“ಸಮುದ್ರದಾಳದಲ್ಲಿ ಮಣ್ಣು ಭುಗಿಲೇಳುವುದನ್ನು ಕಣ್ಣಾರೆ ನೋಡಿದ್ದು ನಮಗೆ ಭೂಮಂಡಲ ಅದೆಷ್ಟು ಸಕ್ರಿಯವಾಗಿದೆ ಎಂದು ತೋರಿದೆ,” ಎಂದು ಈ ಅನ್ವೇಷಣೆಯ ನೇತೃತ್ವ ವಹಿಸಿರುವ ಪ್ರೊಫೆಸನ್ ಗಿಲಿಯಾನಾ ಪನಿಯೆರಿ ತಿಳಿಸಿದ್ದಾರೆ.

ಎಂಟು ಅಡಿ ಎತ್ತರವಿರುವ ಬೋರಿಯಾಲಿಸ್ ಮಡ್ ಜ್ವಾಲಾಮುಖಿ ಸಮುದ್ರದಾಳದಲ್ಲಿ 300 ಮೀ ಅಗಲ ಹಾಗೂ 25 ಮೀ ಆಳವಿರುವ ಕುಳಿಯಲ್ಲಿದ್ದು, 18,000 ವರ್ಷಗಳ ಹಿಂದೆ ಸಂಭವಿಸಿದ ಹಿಮಗಟ್ಟುವಿಕೆಯ ಪ್ರಕ್ರಿಯೆಯಲ್ಲಿ ಬಿಡುಗಡೆಯಾದ ಬೃಹತ್‌ ಪ್ರಮಾಣದ ಮೀಥೇನ್‌ನಿಂದ ಉದ್ಭವಿಸಿದೆ ಎನ್ನಲಾಗಿದೆ.

ಜಾಗತಿಕವಾಗಿ ಸಮುದ್ರದಾಳದಲ್ಲಿ ಈ ರೀತಿಯ ಲೆಕ್ಕವಿಲ್ಲದಷ್ಟು ಜ್ವಾಲಾಮುಖಿಗಳು ಇವೆ ಎನ್ನಲಾಗಿದೆ. ಈ ರೀತಿ ಸಮುದ್ರದಾಳದ ವಾತಾವರಣದ ಅಧ್ಯಯನದಿಂದ ಭೂಮಂಡಲದ ಈಗಿನ ವಾತಾವರಣ ಸೃಷ್ಟಿಯಾಗಿದ್ದರ ಹಿಂದಿನ ಕಾರಣಗಳು ಹಾಗೂ ಭೂವೈಜ್ಞನಿಕ ವಿಕಸನಗಳನ್ನು ಅರಿಯಲು ನೆರವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read