ಸೈನಿಕರ ಮಕ್ಕಳ ಸವಾಲುಗಳ ಬಗ್ಗೆ IAF ಅಧಿಕಾರಿಯ ಪೋಸ್ಟ್ ವೈರಲ್

ಮಿಲಿಟರಿ ಸಿಬ್ಬಂದಿಯ ಮಕ್ಕಳು ಜೀವನದಲ್ಲಿ ಹೇಗೆ ಪ್ರತಿ ಬಾರಿಯೂ ಹೊಸ ವಾತಾವರಣ ಮತ್ತು ಜನರೊಂದಿಗೆ ಹೊಂದಿಕೊಳ್ಳಬೇಕಾಗುತ್ತದೆ ಎಂದು ಅವರು ಎದುರಿಸುತ್ತಿರುವ ಸವಾಲುಗಳನ್ನು ಸೇನೆಯ ಮಹಿಳಾ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.

“ಫೌಜಿ ಮಕ್ಕಳು” (ಮಿಲಿಟರಿ ಸಿಬ್ಬಂದಿಯ ಮಕ್ಕಳು) ಎದುರಿಸುತ್ತಿರುವ ಸವಾಲುಗಳ ಕುರಿತು ಭಾರತೀಯ ವಾಯುಪಡೆಯ (IAF) ಅಧಿಕಾರಿ ನಿಹಾರಿಕಾ ಹಂಡಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಗಮನ ಸೆಳೆದಿದ್ದು ತ್ವರಿತವಾಗಿ ವೈರಲ್ ಆಗಿದೆ.

ತನ್ನ ಪೋಸ್ಟ್ ನಲ್ಲಿ, “ಫೌಜಿ ಮಕ್ಕಳು ತಮ್ಮ ಪೋಷಕರ ಮಿಲಿಟರಿ ಪೋಸ್ಟಿಂಗ್‌ಗಳಿಂದಾಗಿ ಆಗಾಗ್ಗೆ ಮನೆಗಳನ್ನು ಬದಲಾಯಿಸುವುದು, ಶಾಲೆಗಳನ್ನು ಬದಲಾಯಿಸುವುದು ಮತ್ತು ನಿರಂತರವಾಗಿ ಬದಲಾಗುತ್ತಿರುವ ನೆರೆಹೊರೆಗಳಿಗೆ ಹೊಂದಿಕೊಳ್ಳುವ ಕೆಲಸವನ್ನು ಎದುರಿಸುತ್ತಲೇ ಇರುತ್ತಾರೆ. ಆಗಾಗ್ಗೆ ತಮ್ಮ ವಸತಿ ಜಾಗಗಳನ್ನು ಬದಲಾಯಿಸುವುದು ಫೌಜಿ ಮಗುವಿಗೆ ಜೀವನದ ಒಂದು ಭಾಗವಾಗಿದೆ. ಅವರು ತಮ್ಮ ಸ್ನೇಹಿತರು ಮತ್ತು ಪರಿಚಿತ ದಿನಚರಿಗಳಿಗೆ ವಿದಾಯ ಹೇಳುವುದು ಮತ್ತು ಹೊಸ ಶಾಲೆ, ಹೊಸ ನೆರೆಹೊರೆ ಮತ್ತು ಕೆಲವೊಮ್ಮೆ ಹೊಸ ದೇಶದಲ್ಲಿ ದಿನಚರಿ ಪ್ರಾರಂಭಿಸುವುದು ಅಷ್ಟು ಸುಲಭವಲ್ಲ” ಎಂದಿದ್ದಾರೆ.

ಓರ್ವ ವ್ಯಕ್ತಿ ಜೀವಿತಾವಧಿಯಲ್ಲಿ ಸರಾಸರಿಯಾಗಿ ಆತ ತನ್ನ ಮನೆಗಳನ್ನು ಬದಲಿಸುವುದಕ್ಕಿಂತ ಈ ಮಕ್ಕಳು ತಮ್ಮ ಆರಂಭಿಕ ವರ್ಷಗಳಲ್ಲಿ ಹೆಚ್ಚು ಜಾಗಗಳನ್ನು ಬದಲಿಸುತ್ತಾರೆ ಎಂದು ನಿಹಾರಿಕಾ ಹಾಂಡಾ ಹೇಳಿದ್ದಾರೆ.

ಸೇನೆಯಲ್ಲಿ ಕೆಲಸ ಮಾಡುವ ತಮ್ಮ ಪೋಷಕರನ್ನು ಮತ್ತು ರಾಷ್ಟ್ರವನ್ನು ಬೆಂಬಲಿಸುವಲ್ಲಿ ಈ ಮಕ್ಕಳು ಮಹತ್ವದ ಪಾತ್ರವನ್ನು ವಹಿಸುತ್ತಾರೆಂದು ನಿಹಾರಿಕಾ ಹಾಂಡಾ ತಿಳಿಸಿದ್ದಾರೆ. ಫೌಜಿ ಮಕ್ಕಳ ಬಗ್ಗೆ ತಮ್ಮ ಮೆಚ್ಚುಗೆ ಮತ್ತು ಗೌರವವನ್ನು ವ್ಯಕ್ತಪಡಿಸಿದ ಅವರು ತನಗೆ ಮತ್ತು ತನ್ನ ಪತಿಗೆ ಅಚಲವಾದ ಬೆಂಬಲದ ಮೂಲವಾಗಿರುವ ತನ್ನದೇ ಪುಟ್ಟ ಮಗುವಿಗೆ ಕೃತಜ್ಞತೆ ಸಲ್ಲಿಸಿದರು. ಈ ಪೋಸ್ಟ್ ವೈರಲ್ ಆಗಿದ್ದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read