ತಮಗಿದ್ದ ದುಶ್ಚಟಗಳ ಕುರಿತು ಬಾಯ್ಬಿಟ್ಟ ಹಿರಿಯ ನಟಿ ರೇಖಾ; ಇಲ್ಲಿದೆ ಶಾಕಿಂಗ್ ವಿವರ

ಬಾಲಿವುಡ್‌ ನಟಿ ರೇಖಾ ಚಿತ್ರರಂಗದಿಂದ ದೂರವಿದ್ರೂ ಅವರ ಪ್ರಸಿದ್ಧಿ ಕಿಂಚಿತ್ತೂ ಕಡಿಮೆ ಆಗಿಲ್ಲ. ತಮ್ಮ ಸ್ಟೈಲ್‌ ನಿಂದಲೇ ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆ ನಿಂತಿದ್ದಾರೆ. ಒಂದು ಕಾಲದಲ್ಲಿ ಉತ್ತುಂಗದಲ್ಲಿದ್ದ ನಟಿ ರೇಖಾ, ವೈಯಕ್ತಿಕ ಜೀವನದಲ್ಲಿಯೂ ಬಹಳ ಜನಪ್ರಿಯರಾಗಿದ್ದರು. ಮೆಗಾಸ್ಟಾರ್‌ ಅಮಿತಾಬ್‌ ಬಚ್ಚನ್‌ ಹಾಗೂ ರೇಖಾ ಪ್ರೀತಿ ವಿಚಾರ ಈಗ್ಲೂ ಚರ್ಚೆಯಲ್ಲಿರುವ ವಿಷ್ಯ. ತಮ್ಮ ಜೀವನವನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟಿರುವ ರೇಖಾ, ಸಿಮಿ ಗರೆವಾಲ್ ಅವರ ಸಂದರ್ಶನವೊಂದರಲ್ಲಿ ಆಸಕ್ತಿಕರ ವಿಷ್ಯವನ್ನು ಹೇಳಿದ್ದರು. ಮದ್ಯಪಾನ, ಡ್ರಗ್ಸ್ ಮತ್ತು ಕಾಮದ ಬಗ್ಗೆ ಮಾತನಾಡಿದ್ದರು.

ರೇಖಾ, ಮದ್ಯಪಾನ ಮಾಡ್ತಾರೆ, ಡ್ರಗ್ಸ್‌ ತೆಗೆದುಕೊಳ್ತಾರೆ ಎನ್ನುವ ಸುದ್ದಿ ಎಲ್ಲಿಯೂ ಕೇಳೋದಿಲ್ಲ ಏಕೆ ಎಂದು ಸಿಮಿ ಗರೆವಾಲ್‌ ಪ್ರಶ್ನೆ ಕೇಳ್ತಾರೆ. ಅದಕ್ಕೆ ಉತ್ತರ ನೀಡುವ ರೇಖಾ, ಖಂಡಿತವಾಗಿಯೂ ನಾನು ಆಲ್ಕೋಹಾಲ್ ಸೇವಿಸಿದ್ದೇನೆ. ನಾನು ಡ್ರಗ್ಸ್ ಸೇವಿಸಿದ್ದೇನೆ. ನಾನು ತುಂಬಾ ಅಶುದ್ಧಳಾಗಿದ್ದೆ. ನಾನು ಕಾಮುಕಳಾಗಿದ್ದೆ. ಆದರೆ ಜೀವನದಿಂದ ಅರ್ಥವಾಯಿತು ಎಂದಿದ್ದಾರೆ. ಇದು ಆಶ್ಚರ್ಯಕರ ಉತ್ತರವಾಗಿತ್ತು.

ಇದೇ ವೇಳೆ ರೇಖಾ, ಅಮಿತಾಬ್‌ ಬಚ್ಚನ್‌ ಪ್ರೀತಿಯ ಬಗ್ಗೆಯೂ ಮಾತನಾಡಿದ್ದರು. ಇವರಷ್ಟು ಪರಿಪೂರ್ಣವಾಗಿ, ಉತ್ಸಾಹದಿಂದ, ಹುಚ್ಚುತನದಿಂದ, ಹತಾಶವಾಗಿ ಪ್ರೀತಿಸುವ ಯಾವುದೇ ಪುರುಷ, ಮಹಿಳೆ, ಮಕ್ಕಳನ್ನು ನಾನು ಭೇಟಿಯಾಗಿಲ್ಲ. ಹೀಗಿರುವಾಗ ಅವರ ಪ್ರೀತಿಯನ್ನು ನಾನೇಕೆ ನಿರಾಕರಿಸಬೇಕು. ನಾನು ಅವನನ್ನು ಸ್ವಲ್ಪ ಹೆಚ್ಚು ಪ್ರೀತಿಸುತ್ತೇನೆ ಎಂದು ರೇಖಾ ಹೇಳಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read