ಬೆಂಗಳೂರು : ನಿನ್ನೆ ಜ್ವರ ಬಂದು ಮಲಗಿದ್ದೆ, ಸಚಿವ ಕೆ.ಎನ್ ರಾಜಣ್ಣ ವಜಾ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ”ನಿನ್ನೆ ಜ್ವರ ಬಂದು ಮಲಗಿದ್ದೆ, ನನಗೆ ಏನು ಆಗಿದೆ ಗೊತ್ತಿಲ್ಲ . ಹೈಕಮಾಂಡ್ ನಮಗೆ ಸುಪ್ರೀಂ, ಅದು ಏನು ಹೇಳುತ್ತೋ ಅದೇ ಫೈನಲ್ ..ರಾಜಣ್ಣ ವಜಾ ಆಗಿರುವ ಬಗ್ಗೆ ನನಗೆ ಒತ್ತಿಲ್ಲ.ಕಾಂಗ್ರೆಸ್ ನ್ಯಾಯದ ಪರ, ಕಾಂಗ್ರೆಸ್ ನಲ್ಲಿ ನಾವೆಲ್ಲಾ ದೋಸ್ತಿಗಳೇ” ಎಂದು ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.