ನವದೆಹಲಿ: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ನಾನು ಸಾಯಲು ಬಯಸುತ್ತೇನೆ ಎಂದು ಜಾಲತಾಣದಲ್ಲಿದಲ್ಲಿ ಪೋಸ್ಟ್ ಹಾಕಿದ್ದು, ವೈರಲ್ ಆಗಿದೆ.
ನನ್ನ ಸ್ನೇಹಿತರೇ, ನಾನು ಸಾಯಲು ಬಯಸುತ್ತೇನೆ. ನನ್ನ ದೇಶಕ್ಕೆ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಮತ್ತು ಈಗ ನನಗೆ ವಿಶ್ರಾಂತಿ ಬೇಕು ಎಂದು ಅವರು ತಿಳಿಸಿದ್ದಾರೆ.
ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು ಭಾರತೀಯ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷರು ಮತ್ತು ಭಾರತದ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶರಾಗಿದ್ದಾರೆ. ಅವರ ಈ ಪೋಸ್ಟ್ ಗೆ ಭಾರೀ ಸಂಖ್ಯೆಯ ಜನ ಪ್ರತಿಕ್ರಿಯೆ ನೀಡಿದ್ದು, ಇಂತಹ ನಿರ್ಧಾರ ಬೇಡವೆಂದು ಮನವಿ ಮಾಡಿದ್ದಾರೆ.
ಆದರೆ, ಮಾರ್ಕಂಡೇಯ ಕಾಟ್ಜು ಪೋಸ್ಟ್ ವೈರಲ್ ಆಗುತ್ತಲೇ ಅವರ ಖಾತೆ ಹ್ಯಾಕ್ ಆಗಿರುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
I want to die my friends. I have done my duty to my country, and now I need rest
— Markandey Katju (@mkatju) April 28, 2025