‘ಇಂದಿರಾ ಕ್ಯಾಂಟೀನ್’ ಅವ್ಯವಹಾರ ಕಣ್ಣಾರೆ ಕಂಡೆ, ಎಲ್ಲದಕ್ಕೂ ಫುಲ್ ಸ್ಟಾಪ್ ಇಡುತ್ತೇನೆ : ಡಿಸಿಎಂ ಡಿಕೆಶಿ ಗುಡುಗು

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿದ್ದು, ‘ಇಂದಿರಾ ಕ್ಯಾಂಟೀನ್’ ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿಕೆಶಿ ‘ ಇಷ್ಟು ದಿನ ಇಂದಿರಾ ಕ್ಯಾಂಟೀನ್ ಅವ್ಯವಹಾರವನ್ನು ಕಿವಿಯಲ್ಲಿ ಕೇಳಿದ್ದೆ, ಈಗ ಕಣ್ಣಾರೆ ಕಂಡೆ. ಇದಕ್ಕೆಲ್ಲಾ ಒಂದು ಫುಲ್ ಸ್ಟಾಪ್ ಇಡುತ್ತೇನೆ ಎಂದರು. ಇಂದಿರಾ ಕ್ಯಾಂಟಿನ್ಗೆ ಹೋಗಿದ್ದೆ, ಅಲ್ಲಿ ಆಹಾರ ಖಾಲಿ ಆಗಿತ್ತು, ಕೆಲವು ಕಡೆ ಐದು ರೂಪಾಯಿಗೆ ಹತ್ತು ರೂಪಾಯಿ ಕಲೆಕ್ಟ್ ಮಾಡುತ್ತಿದ್ದಾರೆ. ಬಹಳ ವರ್ಷದಿಂದ ಹೀಗೆ ನಡೆಯುತ್ತಿದೆ. ಎಲ್ಲವನ್ನೂ ರಿಪೇರಿ ಮಾಡ್ತೀನಿ ಎಂದರು.

ತ್ಯಾಜ್ಯ ಸಂಸ್ಕರಣಾ ಕೇಂದ್ರಕ್ಕೆ ಭೇಟಿ ಮಾಡಿದ್ದೀನಿ. ಇಲ್ಲಿ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡ್ತಿಲ್ಲ. ಅದನ್ನ ಕಮಿಷನರ್ಗೆ ತೋರಿಸಿದ್ದೇನೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳ್ಳಂಬೆಳಗ್ಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಸಾರ್ಜನಿಕರ ಜೊತೆಗೆ ಉಪಹಾರ ಸೇವಿಸಿದ್ದಾರೆ. ಬೆಂಗಳೂರಿನ ದಾಸರಹಳ್ಳಿಯಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ತೆರಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರ ಜೊತೆಗೆ ಕೂತು ಉಪಹಾರ ಸೇವಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಮೊದಲು ಬೆಳಗ್ಗೆ ಬೆಂಗಳೂರಿನ ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್ ಗೆ ಹೋಗಿದ್ದರು. ಅಲ್ಲಿ ತಿಂಡಿ ಖಾಲಿಯಾದ ಹಿನ್ನೆಲೆಯಲ್ಲಿ ದಾಸರಹಳ್ಳಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿದ್ದು, ಅಲ್ಲಿ ಸಾರ್ವಜನಿಕರ ಜೊತೆಗೆ ಕೂತು ಕೇಸರಿಬಾತ್, ಉಪ್ಪಿಟ್ಟು ಸೇವನೆ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read