ಶಾರುಖ್​ ನನ್ನ ಕ್ರಷ್​ ಎಂದ ಅಜ್ಜಿ: ಐ ಲವ್​ ಯೂ ಎಂದ ನಟ

ಅಹಮದಾಬಾದ್​: ಶಾರುಖ್​ ಖಾನ್​ ಅವರಿಗೆ ಅಭಿಮಾನಿಗಳು ಲಕ್ಷಾಂತರ ಮಂದಿ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಇವರಿಗೆ ಅಭಿಮಾನಿಗಳು ಹೆಚ್ಚು. ಆದರೆ ಪಠಾಣ್​ ಚಿತ್ರದ ಬಳಿಕ ಇವರ ವರ್ಚಸ್ಸು ಇನ್ನಷ್ಟು ಹೆಚ್ಚಿದೆ. 57ನೇ ವಯಸ್ಸಿನಲ್ಲಿಯೂ 27 ವರ್ಷದ ಯುವಕರನ್ನು ನಾಚಿಸುವಂತೆ ಸಿಕ್ಸ್​ ಪ್ಯಾಕ್​ನಿಂದ ಪಠಾಣ್​ನಲ್ಲಿ ಮಿಂಚಿರೋ ಶಾರುಖ್​ ಈಗೊಂದು ರೀತಿಯಲ್ಲಿ ನ್ಯಾಷನಲ್​ ಕ್ರಷ್​ ಆಗುತ್ತಿದ್ದಾರೆ.
ಎಲ್ಲರಿಗೂ ಶಾರುಖ್​ ಮೇಲೆ ಕ್ರಷ್​ ಆಗಿರುವಾಗ ಗುಜರಾತ್​ನ ವೃದ್ಧೆಯೊಬ್ಬರು ಕೂಡ ತಮ್ಮ ಕ್ರಷ್​ ಶಾರುಖ್​ ಖಾನ್​ ಎಂದು ಹೇಳಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

ಸಿದ್ಧಾರ್ಥ್ ಅಮಿತ್ ಭಾವಸರ್ ಅವರು ತಮ್ಮ ಅಜ್ಜಿಯ ಕುರಿತು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಅವರ ಅಜ್ಜಿ ತಮ್ಮ ಕ್ರಷ್​ ಶಾರುಖ್​ ಮತ್ತು ಧರ್ಮೇಂದ್ರ ಎನ್ನುವುದನ್ನು ಕೇಳಬಹುದು. ಇದರ ವಿಡಿಯೋ ಶೇರ್​ ಆಗುತ್ತಿದ್ದಂತೆಯೇ ಹಲವಾರು ಮಂದಿ ಶಾರುಖ್​ ನ್ಯಾಷನಲ್​ ಕ್ರಷ್​ ಆಗಿದ್ದಾರೆ ಎಂದಿದ್ದಾರೆ. ಆದರೆ ಈ ವೃದ್ಧೆಯ ಮಾತಿಗೆ ಖುದ್ದು ಪ್ರತಿಕ್ರಿಯೆ ನೀಡಿರುವ ಶಾರುಖ್​ ಅವರು ನಾನೂ ನಿಮ್ಮನ್ನು ಪ್ರೀತಿಸುತ್ತೇನೆ. ಐ ಲವ್​ ಯು ಎಂದು ಹೇಳಿ ಅಜ್ಜಿಯನ್ನು ಖುಷಿ ಪಡಿಸಿದ್ದಾರೆ.

https://twitter.com/iamsrk/status/1628321340343328769?ref_src=twsrc%5Etfw%7Ctwcamp%5Etweetembed%7Ctwterm%5E162

https://twitter.com/musicwaalaa/status/1627943106401406979?ref_src=twsrc%5Etfw%7Ctwcamp%5Etweetembed%7Ctwterm%5E1627943106401406979%7Ctwgr%5Efad3ee6d27f1ae71f7cab315760402a57b2ba0d2%7Ctwcon%5Es1_&ref_url=https%3A%2F%2Fwww.news18.com%2Fbuzz%2Fi-love-you-baa-srks-adorable-response-in-gujarati-to-old-lady-who-has-crush-on-him-7142473.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read