ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಐ ಲವ್ ಮೊಹಮ್ಮದ್ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ನದೀಮ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಹಿಂಸಾಚಾರಕ್ಕೆ ಪ್ರಚೋದಿಸಿದ ಆರೋಪದಲ್ಲಿ ಶಹಜಹಾನ್ ಪುರದಲ್ಲಿ ನದೀಮ್ ನನ್ನು ಬಂಧಿಸಲಾಗಿದೆ. ನದೀಮ್ ಇತ್ತೇಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ತೌಕಿರ್ ರಜಾ ಖಾನ್ ಆಪ್ತ ಸಹಾಯಕ ಎಂದು ತಿಳಿದುಬಂದಿದೆ.
ಹಿಂಸಾಚಾರ ಪ್ರಕರಣ ಸಂಅಬ್ಂಧ ಈವರೆಗೆ 34 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.
ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಏಳು ಪೊಲೀಸ್ ಠಾಣೆ ವ್ಯಾಪ್ತಿಯ ಐದು ಕೌನ್ಸಿಲರ್ ಗಳು ಸೇರಿ 77 ಜನರು ಖಲೀಲ್ ಶಾಲೆ ಮುಂದೆ ಜನರನ್ನು ಸೇರಿಸಿದ್ದರು. ಓರ್ವ ಕೌನ್ಸಿಲರ್ ನನ್ನು ಬಂಧಿಸಲಾಗಿದೆ.