BREAKING : ‘ನಾನು- ವಿಜಯ್ ದೇವರಕೊಂಡ ಮದುವೆಯಾಗುತ್ತಿದ್ದೇವೆ’ : ಕೊನೆಗೂ ಮೌನ ಮುರಿದ ನಟಿ ರಶ್ಮಿಕಾ ಮಂದಣ್ಣ.!

ದುನಿಯಾ ಡಿಜಿಟಲ್ ಡೆಸ್ಕ್ : ನಟ ವಿಜಯ್ ದೇವರಕೊಂಡ ಅವರೊಂದಿಗಿನ ನಿಶ್ಚಿತಾರ್ಥದ ವರದಿಗಳು ಹರಿದಾಡಿದ ನಂತರ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸುದ್ದಿಯಾಗಿದ್ದರು. ಇಬ್ಬರೂ ಫೆಬ್ರವರಿ 2026 ರಲ್ಲಿ ಮದುವೆಯಾಗಬಹುದು ಎಂದು ವದಂತಿಗಳು ಹರಡಿದ್ದವು. ಇದೀಗ ಎಲ್ಲಾ ವದಂತಿಗಳಿಗೆ ನಟಿ ನಟಿ ರಶ್ಮಿಕಾ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ನೀವು ಯಾರನ್ನು ಮದುವೆ ಆಗುತ್ತೀರಿ ಎಂದು ಕೇಳಲಾಯಿತು. ಇದಕ್ಕೆ ಹಿಂದು ಮುಂದು ಯೋಚಿಸದೇ ನಾನು ವಿಜಯ್ ಅವರನ್ನ ಮದುವೆ ಆಗ್ತೀನಿ ಎಂದಿದ್ದಾರೆ. ಒಂದು ವೇಳೆ ಈ ಸುದ್ದಿ ಸುಳ್ಳಾಗಿದ್ರೆ ರಶ್ಮಿಕಾ ಅಲ್ಲಗೆಳೆಯುತ್ತಿದ್ದರು. ಆದರೆ ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಮದುವೆ ದಿನಾಂಕ ಫಿಕ್ಸ್ ಆಗಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚೆಗೆ ಬಿಡುಗಡೆಯಾದ ಅವರ ಬಾಲಿವುಡ್ ಚಿತ್ರ ‘ತಮ್ಮಾ’ ಚಿತ್ರದ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ರಶ್ಮಿಕಾ ಅವರನ್ನು ಅವರ ನಿಶ್ಚಿತಾರ್ಥದ ಬಗ್ಗೆ ಕೇಳಲಾಯಿತು. ಆಗ ಅವರು “ಎಲ್ಲರಿಗೂ ಅದರ ಬಗ್ಗೆ ತಿಳಿದಿದೆ” ಎಂದು ಪ್ರತಿಕ್ರಿಯಿಸಿದರು. “ಈ ಜೋಡಿ ಮುಂದಿನ ವರ್ಷ ಮದುವೆಯಾಗಲು ಯೋಜಿಸುತ್ತಿದೆ”. ಫೆಬ್ರವರಿ ವಿವಾಹ ಸಮಾರಂಭದ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ. ದಕ್ಷಿಣ ಭಾರತೀಯ ಮತ್ತು ರಾಜಸ್ಥಾನಿ ಪದ್ಧತಿಗಳನ್ನು ಸಂಯೋಜಿಸಿ ಮದುವೆ ನಡೆಯಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read