‘ಹಾರ್ನ್ ಓಕೆ ಪ್ಲೀಸ್’ ಸಿನಿಮಾ ಸೆಟ್ನಲ್ಲಿ ನಾನಾ ಪಾಟೇಕರ್ ವಿರುದ್ಧ ಅನೈತಿಕ ವರ್ತನೆಯ ಆರೋಪ ಮಾಡುವ ಮೂಲಕ ಭಾರತದಲ್ಲಿ #MeToo ಆಂದೋಲನಕ್ಕೆ ನಾಂದಿ ಹಾಡಿದ ನಟಿ ತನುಶ್ರೀ ದತ್ತಾ ಮತ್ತೊಮ್ಮೆ ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ.
ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ನಟಿ ಕಣ್ಣೀರು ಹಾಕುತ್ತಾ ತನ್ನ ಸ್ವಂತ ಮನೆಯಲ್ಲಿ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಹೇಳಿಕೊಳ್ಳುವುದನ್ನು ಕಾಣಬಹುದು.‘ ನಾನು ಈ ಕಿರುಕುಳದಿಂದ ಬೇಸತ್ತಿದ್ದೇನೆ!! ಇದು 2018 ರಿಂದ ನಡೆಯುತ್ತಿದೆ . ದಯವಿಟ್ಟು ಯಾರಾದರೂ ನನಗೆ ಸಹಾಯ ಮಾಡಿ’ ಎಂದು ಬೇಡಿಕೊಂಡಿದ್ದಾರೆ.
ವೀಡಿಯೋದಲ್ಲಿ ತನುಶ್ರೀ ಅವರು ದುಃಖಿತಳಾಗಿದ್ದು, “ನನ್ನ ಮನೆಯಲ್ಲಿ ನನಗೆ ಕಿರುಕುಳ ನೀಡಲಾಗುತ್ತಿದೆ. ಮುಜೇ ಮೇರೆ ಹೈ ಘರ್ ಮೇ ಪರೇಶಾನ್ ಕಿಯಾ ಜಾ ರಹಾ ಹೈ. ನಾನು ಪೊಲೀಸರಿಗೆ ಕರೆ ಮಾಡಿದೆ. ಅವರು ಬಂದು ದೂರು ನೀಡಲು ಪೊಲೀಸ್ ಠಾಣೆಗೆ ಬರಲು ಹೇಳಿದರು. ನಾನು ಬಹುಶಃ ನಾಳೆ ಅಥವಾ ನಂತರ ಹೋಗುತ್ತೇನೆ ಎಂದಿದ್ದಾರೆ.
ನಿರಂತರ ಒತ್ತಡದಿಂದಾಗಿ ನನ್ನ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ ಎಂದು ನಟಿ ಬಹಿರಂಗಪಡಿಸಿದ್ದಾರೆ. “ಮೇರಿ ತಬಿಯಾತ್ ಖರಾಬ್ ಹೋ ಗಯಿ ಹೈ. ಮೇ ಕುಚ್ ಕಾಮ್ ನಹಿ ಕರ್ ಪಾ ರಹಿ ಹೂಂ. ಮೇರಾ ಪುರಾ ಘರ್ ಗಲೀಜು ಹೋ ಚುಕಾ ಹೈ. ನನ್ನ ಮನೆಯಲ್ಲಿ ಕೆಲಸದವರನ್ನು ಸಹ ನೇಮಿಸಿಕೊಳ್ಳಲು ಸಹ ಸಾಧ್ಯವಿಲ್ಲ.. ಅವರು ಬಂದು ನನ್ನ ಮನೆಯಿಂದ ವಸ್ತುಗಳನ್ನು ಕದಿಯುತ್ತಿದ್ದರು. ನಾನು ನನ್ನ ಎಲ್ಲಾ ಕೆಲಸಗಳನ್ನು ಮಾಡಬೇಕು. ನನ್ನ ಸ್ವಂತ ಮನೆಯಲ್ಲಿ ನನಗೆ ತೊಂದರೆಯಾಗುತ್ತಿದೆ. ದಯವಿಟ್ಟು ಯಾರಾದರೂ ನನಗೆ ಸಹಾಯ ಮಾಡಿ,” ಎಂದು ಅವರು ಬೇಡಿಕೊಂಡಿದ್ದಾರೆ.
A post shared by Tanushree Dutta Miss India Universe (@iamtanushreeduttaofficial)