ಬೆಲೆ ಏರಿಕೆ ನಡುವೆ ಕಾರ್ ಖರೀದಿಸುವವರಿಗೆ ಭರ್ಜರಿ ಸುದ್ದಿ: 70 ಸಾವಿರ ರೂ.ವರೆಗೆ ರಿಯಾಯಿತಿ ನೀಡಲಿದೆ ಹುಂಡೈ

ನವದೆಹಲಿ: ಹುಂಡೈ ಕಂಪನಿಯ ವಿವಿಧ ಮಾದರಿ ಕಾರ್ ಗಳ ಮೇಲೆ ಈಗ 70,000 ರೂ. ವರೆಗಿನ ಅದ್ಭುತ ಪ್ರಯೋಜನಗಳನ್ನು ನೀಡುತ್ತಿದೆ. ಕಂಪನಿಯು ಈ ತಿಂಗಳ ಅಂತ್ಯದವರೆಗೆ(ಏಪ್ರಿಲ್ 30, 2025) ಈ ಪ್ರಯೋಜನವನ್ನು ನೀಡಿದೆ. ಈ ತಿಂಗಳ ನಂತರ, ದಕ್ಷಿಣ ಕೊರಿಯಾದ ಕಾರ್ ತಯಾರಕ ಹುಂಡೈ ಭಾರತದಲ್ಲಿ ತನ್ನ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಲಿದೆ.

ಹುಂಡೈ ನೀಡುವ ರಿಯಾಯಿತಿಯಲ್ಲಿ ಹ್ಯಾಚ್‌ ಬ್ಯಾಕ್‌ ಗಳು ಮತ್ತು ಕಾಂಪ್ಯಾಕ್ಟ್ ಎಸ್‌ಯುವಿ ಮಾದರಿಗಳು ಸೇರಿವೆ. ಪ್ರಯೋಜನಗಳಲ್ಲಿ ನಗದು ರಿಯಾಯಿತಿಗಳು, ಸ್ಕ್ರ್ಯಾಪೇಜ್ ಬೋನಸ್ ಮತ್ತು ವಿನಿಮಯ ರಿಯಾಯಿತಿಗಳು ಸೇರಿವೆ.

ಹುಂಡೈ ವೆನ್ಯೂ

ಹುಂಡೈ ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿಗೆ 70,000 ರೂ. ವರೆಗಿನ ಪ್ರಯೋಜನ ಪಡೆಯಬಹುದು. ಎಸ್‌ಯುವಿಯ ಮೂಲ ಆವೃತ್ತಿಯ ಬೆಲೆ 7,94,100 ರೂ (ಎಕ್ಸ್-ಶೋರೂಂ ಬೆಲೆ). ವೆನ್ಯೂದಲ್ಲಿ ನೀಡಲಾಗುವ ಎಂಜಿನ್‌ಗಳು 1.2 L ಕಪ್ಪಾ ಪೆಟ್ರೋಲ್, 1.0 L ಕಪ್ಪಾ ಟರ್ಬೊ GDi ಪೆಟ್ರೋಲ್ ಮತ್ತು 1.5 L U2 CRDi ಡೀಸೆಲ್. ಈ ಕಾಂಪ್ಯಾಕ್ಟ್ SUV ಗೆ ಲಭ್ಯವಿರುವ ಟ್ರಾನ್ಸ್‌ಮಿಷನ್ ಆಯ್ಕೆಗಳು 5 MT, 6 MT ಮತ್ತು iMT.

ಹುಂಡೈ ಗ್ರ್ಯಾಂಡ್ i10 NIOS

ಹುಂಡೈ ಗ್ರ್ಯಾಂಡ್ i10 NIOS ಹ್ಯಾಚ್‌ ಬ್ಯಾಕ್ ತನ್ನ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಕಾರ್ ಗಳಲ್ಲಿ ಒಂದಾಗಿದೆ. ಇದರ ಪ್ರಯೋಜನಗಳು 68,000 ರೂ. ವರೆಗೆ ಸಿಗುತ್ತವೆ. ಕಾರ್ ನ ಮೂಲ ಆವೃತ್ತಿಯ ಬೆಲೆ 5,98,300 ರೂ.(ಎಕ್ಸ್-ಶೋರೂಂ ಬೆಲೆ). ಗ್ರ್ಯಾಂಡ್ i10 ನಲ್ಲಿ ನೀಡಲಾಗುವ ಎಂಜಿನ್‌ಗಳು 1.2 L ಕಪ್ಪಾ ಪೆಟ್ರೋಲ್ ಮತ್ತು 1.2 L ಬೈ-ಇಂಧನ (CNG ಜೊತೆಗೆ ಪೆಟ್ರೋಲ್). i10 ಗೆ ಲಭ್ಯವಿರುವ ಟ್ರಾನ್ಸ್‌ಮಿಷನ್ ಆಯ್ಕೆಗಳು 5 ಸ್ಪೀಡ್ MT/ ಸ್ಮಾರ್ಟ್ ಆಟೋ AMT.

ಹುಂಡೈ i20

ಹುಂಡೈ i20 ಈ ವಿಭಾಗದಲ್ಲಿ ನೀಡಲಾಗುವ ವಿಶಾಲವಾದ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಪ್ರಯೋಜನಗಳು 65,000 ರೂ.ವರೆಗೆ ಸಿಗುತ್ತವೆ. ಕಾರ್ ನ ಮೂಲ ಆವೃತ್ತಿಯ ಬೆಲೆ 7,04,400 ರೂ.(ಎಕ್ಸ್-ಶೋರೂಂ ಬೆಲೆ). i20 ನಲ್ಲಿ ನೀಡಲಾಗುವ ಎಂಜಿನ್ 1.2 L ಕಪ್ಪಾ ಪೆಟ್ರೋಲ್. i20 ಗೆ ಲಭ್ಯವಿರುವ ಟ್ರಾನ್ಸ್‌ಮಿಷನ್ ಆಯ್ಕೆಗಳು 5 ಸ್ಪೀಡ್ MT ಮತ್ತು IVT.

ಹ್ಯುಂಡೈ ಎಕ್ಸ್‌ ಟರ್

ಹ್ಯುಂಡೈ ಎಕ್ಸ್‌ ಟರ್ ಕಾಂಪ್ಯಾಕ್ಟ್ ಎಸ್‌ಯುವಿ 50,000 ರೂ.ವರೆಗಿನ ಪ್ರಯೋಜನಗಳನ್ನು ಪಡೆಯುತ್ತದೆ. ಎಸ್‌ಯುವಿಯ ಮೂಲ ಆವೃತ್ತಿಯ ಬೆಲೆ 6,20,700ರೂ. (ಎಕ್ಸ್-ಶೋರೂಂ ಬೆಲೆ). ಎಕ್ಸ್‌ ಟರ್‌ನಲ್ಲಿ ನೀಡಲಾಗುವ ಎಂಜಿನ್‌ಗಳು 1.2 ಲೀ ಕಪ್ಪಾ ಪೆಟ್ರೋಲ್ ಮತ್ತು 1.2 ಲೀ ಬೈ-ಇಂಧನ ಕಪ್ಪಾ ಪೆಟ್ರೋಲ್ ಜೊತೆಗೆ ಸಿಎನ್‌ಜಿ. ಕಾಂಪ್ಯಾಕ್ಟ್ ಎಸ್‌ಯುವಿಗೆ ಲಭ್ಯವಿರುವ ಟ್ರಾನ್ಸ್‌ಮಿಷನ್ ಆಯ್ಕೆಗಳು 5 ಸ್ಪೀಡ್ ಎಂಟಿ / ಸ್ಮಾರ್ಟ್ ಆಟೋ ಎಎಮ್‌ಟಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read