ವಾಹನ ಪ್ರಿಯರ ಫೇವರಿಟ್‌ ಆಗಿಬಿಟ್ಟಿವೆ ಹ್ಯುಂಡೈ ಮತ್ತು ಕಿಯಾ ಕಂಪನಿಗಳು, ಬರೋಬ್ಬರಿ 15 ಲಕ್ಷ ಎಲೆಕ್ಟ್ರಿಕ್ ಕಾರುಗಳ ಮಾರಾಟ‌ !

ದಕ್ಷಿಣ ಕೊರಿಯಾದ ಹುಂಡೈ ಮೋಟಾರ್ ಮತ್ತು ಅದರ ಸಹೋದರ ಕಂಪನಿ ಕಿಯಾ, ಎಲೆಕ್ಟ್ರಿಕ್‌ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಎರಡೂ ಕಂಪನಿಗಳ ಒಟ್ಟಾರೆ ಎಲೆಕ್ಟ್ರಿಕ್‌ ವಾಹನಗಳ ಮಾರಾಟ 15 ಲಕ್ಷ ದಾಟಿದೆ. ಹ್ಯುಂಡೈ ತನ್ನ ಮೊದಲ EV ಮಾಡೆಲ್ – ಬ್ಲೂಒನ್ ಅನ್ನು ದಕ್ಷಿಣ ಕೊರಿಯಾದಲ್ಲಿ 2011ರ ಜುಲೈನಲ್ಲಿ ಬಿಡುಗಡೆ ಮಾಡಿತ್ತು. ಇದು i10 ಮಿನಿ ಕಾರನ್ನು ಆಧರಿಸಿದೆ.

ಹ್ಯುಂಡೈ ಮತ್ತು ಕಿಯಾ, 2023 ರಲ್ಲಿ 5,16,441 EV ಗಳನ್ನು ಮಾರಾಟ ಮಾಡಿವೆ. ವರ್ಷದ ಕೊನೆಯಲ್ಲಿ ಇದು 1.53 ಮಿಲಿಯನ್ ಯುನಿಟ್‌ಗಳಿಗೆ ತಲುಪಿದೆ ಎನ್ನಲಾಗ್ತಿದೆ. ಕಳೆದ ವರ್ಷ 10 ಹ್ಯುಂಡೈ ಎಲೆಕ್ಟಿಕ್‌ ಕಾರುಗಳು ಹಾಗೂ 8 ಕಿಯಾ ಇವಿಗಳು ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗಿದ್ದವು. ಹ್ಯುಂಡೈನ ಕೋನಾ ಎಲೆಕ್ಟ್ರಿಕ್ ಮತ್ತು ಅಯೋನಿಕ್ 5, ಕಿಯಾದ ನಿರೋ ಮತ್ತು ಇವಿ 6 ಅತಿ ಹೆಚ್ಚು ಮಾರಾಟವಾಗ್ತಿವೆ.

ಹ್ಯುಂಡೈ ಈ ವರ್ಷದ ಕೊನೆಯಲ್ಲಿ ಕ್ಯಾಸ್ಪರ್ ಮಿನಿ ಕಾರಿನ ಎಲೆಕ್ಟ್ರಿಫೈಡ್ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸಿದೆ. ಅದೇ ಸಮಯದಲ್ಲಿ ಕಿಯಾ ಎರಡನೇ ತ್ರೈಮಾಸಿಕದಲ್ಲಿ ತನ್ನ ದೇಶೀಯ ಸ್ಥಾವರದಲ್ಲಿ (ದಕ್ಷಿಣ ಕೊರಿಯಾ) EV3 ಕಾಂಪ್ಯಾಕ್ಟ್ EV ಮಾದರಿಯ ಉತ್ಪಾದನೆಯನ್ನು ಪ್ರಾರಂಭಿಸಬಹುದು.

ಹ್ಯುಂಡೈ 2024 ರಲ್ಲಿ 4.24 ಮಿಲಿಯನ್ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಕಳೆದ ವರ್ಷ ಒಟ್ಟಾರೆ 4.21 ಮಿಲಿಯನ್‌ ವಾಹನಗಳು ಸೇಲ್‌ ಆಗಿದ್ದವು. ಕಳೆದ ವರ್ಷ 3.08 ಮಿಲಿಯನ್‌ ವಾಹನಗಳನ್ನು ಮಾರಾಟ ಮಾಡಿದ್ದ ಕಿಯಾ, ಈ ಬಾರಿ 3.2 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ

ಈ ಎರಡೂ ಕಂಪನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತವೆ. ಹುಂಡೈ ಭಾರತದಲ್ಲಿ ಎರಡನೇ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿದೆ. ಕಿಯಾ ಕೂಡ ನಿರಂತರವಾಗಿ ಪ್ರಗತಿ ಹೊಂದುತ್ತಿದೆ. ಹುಂಡೈ ಕಂಪನಿಯ ಎರಡು ಎಲೆಕ್ಟ್ರಿಕ್‌ ಕಾರುಗಳು ಮಾತ್ರ ಭಾರತದಲ್ಲಿ ಲಭ್ಯವಿವೆ. ಕೋನಾ ಮತ್ತು ಅಯೋನಿಕ್ 5. ಕಿಯಾ ಕಂಪನಿಯ EV6 ಮಾತ್ರ ಭಾರತದಲ್ಲಿ ದೊರೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read