SHOCKING NEWS: ಚಿಕಿತ್ಸೆಗೆ ಬಂದಿದ್ದ ಹುಚ್ಚನನ್ನೇ ಪ್ರೀತಿಸಿ ವಿವಾಹವಾದ ಮನೋವೈದ್ಯೆ: ಪತಿ ಹಾಗೂ ಕುಟುಂಬದವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ

ಹೈದರಾಬಾದ್: ಇದೆಂತಹ ಹುಚ್ಚು ಪ್ರೀತಿ. ರೋಗಿಯ ಕಾಯಿಲೆ ವಾಸಿ ಮೇಡಬೇಕಾದ ವೈದ್ಯಯೇ ರೋಗಿಯೊಂದಿಗೆ ಪ್ರೀತಿಯಲ್ಲಿ ಬಿದ್ದು, ತನ್ನ ಬದುಕನ್ನೇ ಅಂತ್ಯಗೊಳಿಸಿಕೊಂಡಿರುವ ದಾರುಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ತನ್ನ ಬಳಿ ಚಿಕಿತ್ಸೆಗೆಂದು ಬಂದಿದ್ದ ಹುಚ್ಚನನ್ನು ಪ್ರೀತಿಸಿ ವಿವಾಹವಾಗಿದ್ದ ಮನೋವೈದ್ಯೆ ಪತಿ ಹಾಗೂ ಅತ್ತೆ-ಮಾವನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. 33 ವಷದ ಎ.ರಜಿತಾ ಸಾವಿಗೆ ಶರಣಾಗಿರುವ ಮನೋವೈದ್ಯೆ. ಹೈದರಾಬಾದ್ ನ ಸನತ್ ನಗರದ ಜೆಕ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ವೈದ್ಯೆ ರಜಿತಾ ಪತಿ ರೋಹಿತ್ ಹಾಗೂ ಆತನ ಕುಟುಂಬದವರು ನೀಡುತ್ತಿದ್ದ ನಿರಂತರ ಕಿರುಕುಳದಿಂದ ನೊಂದು ಬೆಂದು ಆತ್ಮಹತ್ಯೆಗೆ ಶರಣಾಗಿದ್ದು, ವೈದ್ಯೆಯ ತಂದೆ ಸಬ್ ಇನ್ಸ್ ಪೆಕ್ಟರ್ ನರಸಿಂಹ ಗೌಡ ನೀಡಿದ ದೂರಿನ ಮೇರೆಗೆ ಸಂಜೀವ್ ರೆಡ್ಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟಕ್ಕೂ ನಡೆದ ಘಟನೆಯಾದರೂ ಏನು? ಇಲ್ಲಿದೆ ಮಾಹಿತಿ.

ಸಬ್ ಇನ್ಸ್ ಪೆಕ್ಟರ್ ನರಸಿಂಹ ಗೌಡ ಪುತ್ರಿ ರಜಿತಾ ಮನೋವಿಜ್ಞಾನದಲ್ಲಿ ಪದವಿ ಪಡೆಯುತ್ತಿದ್ದಾಗ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ರೋಹಿತ್ ನನ್ನು ಭೇಟಿಯಾಗಿದ್ದರು. ರಜಿತಾ ಬಂಜಾರಾ ಹಿಲ್ಸ್ ಆಸ್ಪತ್ರೆಯಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದರು. ಮನೋರೋಗದಿಂದ ಬಳಲುತ್ತಿದ್ದ ರೋಹಿತ್ ರೋಗಿಯಾಗಿದ್ದ. ವೈದ್ಯೆ ರಜಿತಾ ಕೌನ್ಸೆಲಿಂಗ್ ಬಳಿಕ ರೋಹಿತ್ ಮಾನಸಿಕ ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳಾಗಿವೆ. ಸಾಕಷ್ಟು ಚೇತರಿಸಿಕೊಂಡಿದ್ದಾನೆ ಎಂದು ಆತನ ಪೋಷಕ್ರು ಹೇಳುತ್ತಿದ್ದರು.

ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ರೋಹಿತ್ ವೈದ್ಯೆ ರಜಿತಾಬಳಿ ತನ್ನ ಪ್ರೇಮ ನಿವೇದನೆ ಮಾಡಿದ್ದ. ಹೀಗೆ ಮನೋವೈದ್ಯೆ ರಜಿತಾ, ರೋಹಿತ್ ನ ಪ್ರೀತಿಯಲ್ಲಿ ಬಿದ್ದಿದ್ದರು. ಬಳಿಕ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ರೋಹಿತ್ ಮತ್ತೆ ಬದಲಾಗಿದ್ದ. ತನ್ನ ಕೆಲಸ ಬಿಟ್ಟು ಪತ್ನಿ ಸಂಬಳದ ಮೇಲೆ ಅವಲಂಭಿತನಾಗಿದ್ದೂ ಅಲ್ಲದೇ ಆಕೆಗೆ ತೊಂದರೆ ಕೊಟ್ಟು ಆಕೆಯ ಹಣವನ್ನು ಪಾರ್ಟಿ ಹಾಗೂ ವೈಯಕ್ತಿಕ ಖರ್ಚಿಗೆ ಬಳಸುತ್ತಿದ್ದ. ಸಾಲದ್ದಕ್ಕೆ ಆತನ ತಂದೆ-ತಾಯಿಯೂ ವಿಚಿತ್ರ ವರಸೆ ಆರಂಭಿಸಿದ್ದರು. ಆದರೂ ವೈದ್ಯೆಯಾಗಿದ್ದ ರಜಿತಾ ಪತಿ ರೋಹಿತ್ ಗೆ ನಿನ್ನ ನಡವಳಿಕೆಯನ್ನು ಬದಲಿಸಿಕೊ ಎಂದು ಹೇಳುತ್ತಿದ್ದಳು, ಆತನನ್ನು ತಿದ್ದಲು ಸಾಕಷ್ಟು ಯತ್ನಿಸಿದ್ದಳು.

ರೋಹಿತ್ ಹಾಗೂ ಆತನ ತಂದೆ ಕಿಷ್ಟಯ್ಯ, ತಾಯಿ ಸುರೇಖಾ, ಸಹೋದರ ಮೋಹಿತ್, ರಜಿತಾಗೆ ನಿರಂತರ ಕಿರುಕುಳ, ಹಿಂಸೆ ನೀಡುತ್ತಿದ್ದರು. ಅಂತಿಮವಾಗಿ ರಜಿತಾ ಹಣ ನೀಡಲು ನಿರಾಕರಿಸುತ್ತಿದ್ದಂತೆ ರೋಹಿತ್ ರಜಿತಾ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಬೇಸತ್ತ ರಜಿತಾ ಜುಲೈ 16ರಂದು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದ ರಜಿತಾಳನ್ನು ಪೋಷಕರು ಜೆಕ್ ಕಾಲೋನಿಯ ಮನೆಗೆ ಕರೆತಂದಿದ್ದರು. ಜುಲೈ 28ರಂದು ತಮ್ಮ ಮನೆಯ ಸ್ನಾನದ ಗೃಹದ ಕಿಡಕಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು.

ತಲೆಯ ಭಾಗಕ್ಕೆ ಗಂಭೀರವಾದ ಪೆಟ್ಟು ಬಿದ್ದಿದ್ದು, ಅವರನ್ನು ಅಮೀರ್ ಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದ ವೈದ್ಯರು ರಜಿತಾಳ ಮೆಡುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ್ದರು. ಇದೀಗ ರಜಿತಾ ಕೊನೆಯುಸಿರೆಳೆದಿದ್ದಾರೆ. ಮನೋರೋಗಿಯ ಪ್ರೀತಿಯಲ್ಲಿ ಬಿದ್ದ ಮೈನೋವೈದ್ಯೆಯೇ ಪತಿಯ ಹುಚ್ಚಾಟಕ್ಕೆ ದುರಂತ ಅಂತ್ಯಕಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read