BREAKING: ಕಾಲ್ತುಳಿದಲ್ಲಿ ಮಹಿಳೆ ಸಾವು ದುರದೃಷ್ಟಕರ: ನಟ ಅಲ್ಲು ಅರ್ಜುನ್

ಹೈದರಾಬಾದ್: ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ ಬಳಿ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟಿದ್ದು ದುರದೃಷ್ಟಕರ ಎಂದು ನಟ ಅಲ್ಲು ಅರ್ಜುನ್ ಹೇಳಿದ್ದಾರೆ.

ಹೈದರಾಬಾದ್ ನಲ್ಲಿ ಮಾತನಾಡಿದ ಅಲ್ಲು ಅರ್ಜುನ್ ಅವರು, ಸಂಧ್ಯಾ ಥಿಯೇಟರ್ ಬಳಿ ಕಾಲ್ತುಳಿತ ಆಕಸ್ಮಿಕವಾಗಿ ಸಂಭವಿಸಿದೆ. ಇದಕ್ಕೆ ಯಾರೂ ಕಾರಣರಲ್ಲ ಎಂದು ಅವರು ಹೇಳಿದ್ದಾರೆ.

ಮನರಂಜನೆ ನೀಡುವುದೇ ನನ್ನ ಜೀವನದ ಉದ್ದೇಶ. ಮಹಿಳೆ ಮೃತಪಟ್ಟ ವಿಷಯ ಬೆಳಿಗ್ಗೆಯವರೆಗೂ ಗೊತ್ತಿರಲಿಲ್ಲ. ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ವಿಷಯ ತಿಳಿದಾಗ ನನಗೆ ಶಾಕ್ ಆಯಿತು. ಆ ಶಾಕ್ ನಿಂದಾಗಿ ನಾನು ಈಗಲೂ ಹೊರ ಬಂದಿಲ್ಲ ಎಂದು ಹೇಳಿದ್ದಾರೆ.

ಮಹಿಳೆ ಸಾವು ಹಿನ್ನೆಲೆ ‘ಪುಷ್ಪ’ ಸಿನಿಮಾ ವಿಜಯ್ಯೋತ್ಸವ ರದ್ದು ಮಾಡಿದ್ದೇವೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹೇಳಿಕೆಯಿಂದ ನನಗೆ ತುಂಬಾ ನೋವಾಗಿದೆ ಎಂದು ತಿಳಿಸಿದ್ದಾರೆ.

ಇದೊಂದು ಅತ್ಯಂತ ದುರದೃಷ್ಟಕರ ಘಟನೆ. ಇದು ಸಂಪೂರ್ಣವಾಗಿ ಅಪಘಾತವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಆಸ್ಪತ್ರೆಗೆ ದಾಖಲಿಸಿದ ಮಗುವಿನ ಸ್ಥಿತಿಯ ಬಗ್ಗೆ ಪ್ರತಿ ಗಂಟೆಗೆ ಅಪ್‌ ಡೇಟ್ ತೆಗೆದುಕೊಳ್ಳುತ್ತಿದ್ದೇನೆ. ಅವರ ಸ್ಥಿತಿ ಸುಧಾರಿಸುತ್ತಿದೆ. ಈ ಬಗ್ಗೆ ಇದು ಸಾಕಷ್ಟು ತಪ್ಪು ಮಾಹಿತಿ ಇದೆ, ನಾನು ಯಾವುದೇ ಇಲಾಖೆ ಅಥವಾ ರಾಜಕಾರಣಿಯನ್ನು ದೂಷಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read