ಹೊಸ ಉದ್ಯೋಗ ಸಂಭ್ರಮಾಚರಣೆಗೆ ಕರೆದ ಟೆಕ್ಕಿ ಮೇಲೆ ಗ್ಯಾಂಗ್ ರೇಪ್

ಹೈದರಾಬಾದ್: ಹೈದರಾಬಾದ್‌ನಲ್ಲಿ 24 ವರ್ಷದ ಮಹಿಳೆ ಮೇಲೆ ಆಕೆಯ ಬಾಲ್ಯ ಸ್ನೇಹಿತ ಸೇರಿದಂತೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಇತ್ತೀಚೆಗೆ ಸಾಫ್ಟ್‌ ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ ಮಹಿಳೆ, ತನ್ನ ಬಾಲ್ಯದ ಸ್ನೇಹಿತನ ಬಳಿ ತನ್ನ ಸಾಧನೆಯ ಸಂಭ್ರಮಾಚರಣೆ ಬಗ್ಗೆ ಪ್ರಸ್ತಾಪಿಸಿದ್ದಾಳೆ. ಇಬ್ಬರೂ ವನಸ್ಥಲಿಪುರಂನಲ್ಲಿರುವ ರೆಸ್ಟೋರೆಂಟ್-ಕಮ್-ಬಾರ್‌ಗೆ ಹೋಗಿದ್ದಾರೆ. ಆರೋಪಿ ಸ್ನೇಹಿತ ಶಾಲೆಯಲ್ಲಿ ಮಹಿಳೆಯ ಸಹಪಾಠಿಯಾಗಿದ್ದ.

ಮಹಿಳೆಯ ದೂರಿನ ಪ್ರಕಾರ ಅವಳು ಮತ್ತು ಅವಳ ಸ್ನೇಹಿತ ವನಸ್ಥಲಿಪುರಂನ ರೆಸ್ಟೋರೆಂಟ್-ಕಮ್-ಬಾರ್‌ನಲ್ಲಿ ಮದ್ಯ ಸೇವಿಸಿದ ನಂತರ, ಆ ವ್ಯಕ್ತಿ ಆಕೆಯನ್ನು ರೆಸ್ಟೋರೆಂಟ್ ಆವರಣದಲ್ಲಿರುವ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ನಂತರ ವ್ಯಕ್ತಿಯ ಸೋದರಸಂಬಂಧಿ ಕೂಡ ಕೋಣೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ನಂತರ ಇಬ್ಬರು ಪುರುಷರು ಸ್ಥಳದಿಂದ ತೆರಳಿದ್ದಾರೆ. ಮಹಿಳೆ ತನ್ನ ಸಹೋದರನಿಗೆ ಕರೆ ಮಾಡಿ ನಡೆದ ಸಂಗತಿಯನ್ನು ತಿಳಿಸಿದ್ದಾಳೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read