ಹೈದರಾಬಾದ್: ಸೆಕ್ಸ್ ಮಾಡಲು ಒಪ್ಪಲಿಲ್ಲವೆಂದು ಮಡದಿಯನ್ನು ಕೊಂದ ಪತಿ

ಅದಾಗ ತಾನೇ ಮಗುವಾಗಿದ್ದ ಮಡದಿ ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒಪ್ಪಲಿಲ್ಲವೆಂದು ಸಿಟ್ಟಿಗೆದ್ದು ಆಕೆಯನ್ನು ಕೊಲೆ ಮಾಡಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 20ರಂದು ನಡೆದ ಈ ಕೊಲೆಯ ತನಿಖೆಯನ್ನು ಪೊಲೀಸರು 10 ದಿನಗಳ ಒಳಗೆ ಮಾಡಿದ್ದಾರೆ. ಆರೋಪಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ ವೇಳೆ ತಾನು ಕೊಲೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಮೃತರ ಮರಣೋತ್ತರ ಪರೀಕ್ಷೆಯಿಂದ ಆಕೆಯ ಸಾವಿನ ಕಾರಣ ಖಾತ್ರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಿಂಗಳ ಹಿಂದಷ್ಟೇ ತನ್ನ ಎರಡನೇ ಮಗುವಿಗೆ ಜನ್ಮವಿತ್ತಿದ್ದ ಸಂತ್ರಸ್ತೆಯೊಂದಿಗೆ ಮೇ 20ರ ರಾತ್ರಿ ಮಲಗಲು ಆಕೆಯ ಪತಿ ಇಚ್ಛಿಸಿದ್ದಾನೆ. ಆದರೆ ಇದಕ್ಕೆ ಮಡದಿ ನಕಾರವೆತ್ತಿದಾಗ ಸಿಟ್ಟಿಗೆದ್ದ ಆಕೆಯ ಪತಿ ಆಕೆಯ ಕುತ್ತಿಗೆ ಹಿಸುಕಿ ಕೊಂದಿದ್ದಾನೆ. ಇದರ ಬೆನ್ನಿಗೇ ಗಾಬರಿಗೊಂಡ ಆರೋಪಿ ತನ್ನ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾನೆ.

ಸಂತ್ರಸ್ತೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಮಾರ್ಗಮಧ್ಯೆಯೇ ಜೀವ ಕಳೆದುಕೊಂಡಿರುವುದನ್ನು ಆಸ್ಪತ್ರೆ ಮೂಲಗಳು ಖಾತ್ರಿ ಪಡಿಸಿವೆ. ಮಹಿಳೆಯ ತಂದೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಮಹಿಳೆಯ ದೇಹದ ಗಂಟಲಿನ ಮೇಲೆ ಮೊಳೆಗಳ ಗುರುತಗಳಿದ್ದಿದ್ದನ್ನು ಗಮನಿಸಿದ ಪೊಲೀಸರು ಆಕೆಯ ಪತಿಯನ್ನು ವಿಚಾರಣೆ ಮಾಡಿ ಸತ್ಯ ಬಾಯಿ ಬಿಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read