ಭಾರೀ ನಿರೀಕ್ಷಿತ ’ಆದಿಪುರುಷ್’ ಚಿತ್ರ ಶುಕ್ರವಾರದಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಿದೆ. ಇದೇ ವೇಳೆ, ಚಿತ್ರ ವೀಕ್ಷಣೆ ವೇಳೆ ’ಹನುಮಂತನಿಗಾಗಿ’ ಪ್ರತಿ ಸಿನೆಮಾದಲ್ಲೂ ಒಂದೊಂದು ಆಸನ ಮೀಸಲಿಡಬೇಕೆಂದು ಚಿತ್ರ ನಿರ್ಮಾಪಕ ಓಂ ರೌತ್ ವಿನಂತಿಸಿಕೊಂಡಿದ್ದರು.
ಹೀಗೆ ’ಭಜರಂಗಿಗೆ’ ಮೀಸಲಿಟ್ಟ ಆಸನವನ್ನು ಕೇಸರಿ ಬಟ್ಟೆ, ಹಣ್ಣುಗಳು ಹಾಗೂ ಹನುಮಂತನ ಪಟದಿಂದ ಅಲಂಕೃತಗೊಳಿಸಿರುವುದನ್ನು ಚಿತ್ರ ವೀಕ್ಷಣೆಗೆಂದು ಬಂದವರೆಲ್ಲಾ ಕಂಡಿದ್ದಾರೆ.
ಹೈದರಾಬಾದ್‌ನ ಭ್ರಮರಾಂಬಾ ಥಿಯೇಟರ್‌ನಲ್ಲಿ ಹೀಗೆ ’ಭಜರಂಗ ಬಲಿ’ಗೆಂದು ಮೀಸಲಿಟ್ಟಿದ್ದ ಆಸನದಲ್ಲಿ ಕುಳಿತ ಎಂಬ ಆಪಾದನೆ ಮೇಲೆ ವ್ಯಕ್ತಿಯೊಬ್ಬನ ಮೇಲೆ ಪ್ರಭಾಸ್ ಅಭಿಮಾನಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗುವ ವಿಡಿಯೋವೊಂದು ವೈರಲ್ ಆಗಿದೆ.,
ತಿರುಪತಿಯಲ್ಲಿ ಚಿತ್ರದ ಟ್ರೇಲರ್ ಸಮಾರಂಭದ ವೇಳೆ ಮಾತನಾಡಿದ್ದ ಚಿತ್ರನಿರ್ಮಾಪಕ ಓಂ ರಾವತ್, “ರಾಮಾಯಣದ ಪಠಣ ಮಾಡುವಲ್ಲೆಲ್ಲಾ ಹನುಮಂತ ಇರುತ್ತಾನಾದ್ದರಿಂದ, ಈ ಚಿತ್ರವನ್ನು ಬಿತ್ತರಿಸುವ ಚಿತ್ರ ಮಂದಿರಗಳಲ್ಲಿ ಹನುಮಂತನಿಗಾಗಿ ಒಂದೊಂದು ಆಸನ ಮೀಸಲಿಡಲು,” ಕೇಳಿಕೊಂಡಿದ್ದರು.
https://twitter.com/kartheeknaaga/status/1669533089310330881?ref_src=twsrc%5Etfw%7Ctwcamp%5Etweetembed%7Ctwterm%5E1669533089310330881%7Ctwgr%5Ee88963c34c47d484030f3f9a28a41d587792dbf2%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fvideo-hyderabad-man-attacked-while-watching-adipurush-for-sitting-on-lord-hanumans-reserved-seat-in-bhramaramba-theatre
https://twitter.com/fpjindia/status/1669548537300889600?ref_src=twsrc%5Etfw%7Ctwcamp%5Etweetembed%7Ctwterm%5E1669548537300889600%7Ctwgr%5Ee88963c34c47d484030f3f9a28a41d587792dbf2%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fvideo-hyderabad-man-attacked-while-watching-adipurush-for-sitting-on-lord-hanumans-reserved-seat-in-bhramaramba-theatre