ಕೊಚ್ಚಿ: 4 ಕೆ.ಜಿ ಹೈಬ್ರಿಡ್ ಗಾಂಜಾ ಸಾಗಾಟ ಮಾಡುತ್ತಿದ್ದ ಯುವಕನನ್ನು ಕೇರಳದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಯುವಕ ಬ್ಯಾಂಕಾಕ್ ನಿಂದ ಕ್ವಾಲಲಾಂಪುರ ಮೂಲಕ ಕೇರಳಕ್ಕೆ ಬಂದಿದ್ದ. ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಆತನನ್ನು ಪರಿಶಿಲನೆ ನಡೆಸಿದಾಗ 4 ಕೆಜಿ ಗಾಂಜಾ ಪತ್ತೆಯಾಗಿದೆ.
ಸದ್ಯ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಿರುವ ಹೈಬ್ರಿಡ್ ಗಾಂಜಾ ಮೌಲ್ಯ ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇನ್ನು ಈತನ ಹಿಂದೆ ಇನ್ನಷ್ಟು ಜಾಲಗಳಿರುವ ಅನುಮಾನವಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.