ಹೆರಿಗೆಗೆಂದು ಭಾರತಕ್ಕೆ ಬಂದ ಪತ್ನಿ; ವಿದೇಶಲ್ಲಿ ಕುಳಿತು ತ್ರಿವಳಿ ತಲಾಖ್ ನೀಡಿದ ಪತಿ…!

ಮಂಗಳೂರು: ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧಿಸಲಾಗಿದೆ ಆದಗ್ಯೂ ವಿದೇಶದಲ್ಲಿರುವ ಪತಿ ಮಹಾಶಯ ತನ್ನ ಪತ್ನಿಗೆ ತಲಾಖ್ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಹೆರಿಗೆಗಾಗಿ ಭಾರತಕ್ಕೆ ಬಂದ ಪತ್ನಿಗೆ, ವಿದೇಶಲ್ಲಿ ಕುಳಿತು ಪತಿ ವಾಟ್ಸಪ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾನೆ. ಪತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

7 ವರ್ಷಗಳ ಹಿಂದೆ ಮಿಸ್ರಿಯಾ ಹಾಗೂ ತ್ರಿಶೂರ್ ಮೂಲದ ಅಬ್ದುಲ್ ರಷೀದ್ ವಿವಾಹವಾಗಿ ವಿದೇಶದಲ್ಲಿದ್ದರು. ಮಿಸ್ರಿಯಾ ಎರಡನೇ ಮಗುವಿನ ಹೆರಿಗೆಗಾಗಿ ಭಾರತಕ್ಕೆ ಬಂದಿದ್ದಾಳೆ. ಇದೇ ವೇಳೆ ಪತ್ನಿ ಜೊತೆ ಜಗಳ ಮನಸ್ತಾಪದ ಕಾರಣಕ್ಕೆ ಪತಿ ಅಬ್ದುಲ್ ಏಕಾಏಕಿ ವಾಟ್ಸಪ್ ಮೂಲಕ ತ್ರಿವಳಿ ತಲಾಖ್ ಸಂದೇಶ ಕಳುಹಿಸಿದ್ದಾನೆ.

ಕಂಗಾಲಾದ ಪತ್ನಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಠಾಣೆಗೆ ದೂರು ನೀಡಿದ್ದು, ಪತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read