ಪತ್ನಿ ಕೊಲೆಗೈದು ನೀರಿನ ಡ್ರಮ್‌ನಲ್ಲಿ ಶವ ಬಚ್ಚಿಟ್ಟ ಪತಿ ಸಿಕ್ಕಿಬಿದ್ದಿದ್ದು ಹೀಗೆ….

ಕಾರವಾರ: ಉತ್ತರ ಕನ್ನಡ ಜಿಲ್ಲೆ ಹಳಿಯಾಳದಲ್ಲಿ ಪತ್ನಿಯನ್ನೇ ಕೊಲೆಗೈದ ಪತಿ ಮೃತದೇಹವನ್ನು ನೀರಿನ ಬ್ಯಾರೆಲ್ ನಲ್ಲಿ ಬಚ್ಚಿಟ್ಟಿದ್ದಾನೆ. ಹಳಿಯಾಳ ಹಾಗೂ ರಾಮನಗರ ಠಾಣೆ ಪೋಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ತೆರಗಾಂವ ಗ್ರಾಮದ ತುಕಾರಾಮ ಮಡಿವಾಳ(38) ಬಂಧಿತ ಆರೋಪಿಯಾಗಿದ್ದಾನೆ. ಪತ್ನಿ ಶಾಂತಕುಮಾರಿ(34)ಯೊಂದಿಗೆ ವಾಸವಾಗಿದ್ದ ತುಕಾರಾಮ ಬೇರೆ ಮಹಿಳೆಯೊಂದಿಗೆ ಸಲುಗೆಯಿಂದ ಇದ್ದ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಫೆಬ್ರವರಿ 22ರಂದು ದಂಪತಿ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ತುಕಾರಾಮ ನೀರಿನ ಡ್ರಮ್ ನಲ್ಲಿ ಬಚ್ಚಿಟ್ಟಿದ್ದಾನೆ.

ನಂತರ ಖಾನಾಪುರದ ರಿಜ್ವಾನ್ ಅವರ ಟಾಟಾ ಏಸ್ ವಾಹನ ಬಾಡಿಗೆ ಪಡೆದು ರಿಜ್ವಾನ್ ಮತ್ತು ಸಮೀರ್ ಜೊತೆಗೆ ಸೇರಿ ರಾಮನಗರದ ಕಾಡಿನಲ್ಲಿ ಮೃತದೇಹ ಎಸೆಯಲು ಹೋಗಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read