SHOCKING NEWS: ಪತಿ-ಪತ್ನಿ ನಡುವೆ ಜಗಳ; ಹೆತ್ತ ಮಗುವನ್ನೇ ಮೊಸಳೆಗಳಿದ್ದ ನಾಲೆಗೆ ಎಸೆದ ತಾಯಿ

ಕಾರವಾರ: ಪತಿ-ಪತ್ನಿ ಜಗಳದಲ್ಲಿ ಕೋಪಗೊಂಡ ಮಹಿಳೆ ಹೆತ್ತ ಕಂದಮ್ಮನನ್ನೇ ಮೊಸಳೆಗಳಿರುವ ನಾಲೆಗೆ ಬಿಸಾಕಿರುವ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿದೆ.

ಗಂಡ ರವಿಕುಮಾರ್ ಹಾಗೂ ಪತ್ನಿ ಸಾವಿತ್ರಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಗಂಡನ ಮೇಲಿನ ಸಿಟ್ಟಿಗೆ ಸಾವಿತ್ರಿ ಮಗುವನ್ನು ಮೊಸಳೆಗಳಿರುವ ನಾಲೆಗೆ ಎಸೆದಿದ್ದಾಳೆ. ಮಗುವನ್ನು ನಾಲೆಗೆಸೆದ ಬಳಿಕ ಮಡಿದ ತಪ್ಪಿನ ಅರಿವಾಗಿದೆ. ಅಷ್ಟರಲ್ಲಿ 6 ವರ್ಷದ ಮಗು ವಿನೋದ್ ಮೊಸಳೆಗಳ ಬಾಯಿಗೆ ಸಿಲುಕಿ ಮೃತಪಟ್ಟಿದ್ದಾನೆ.

ಮುಳುಗು ತಜ್ಞರು ಬಾಲಕನ ಮೃತದೇಹವನ್ನು ನಾಲೆಯಿಂದ ಹೊರತೆಗೆದಿದ್ದಾರೆ. ಆದರೆ ಬಾಲಕ ಮೃತಪಟ್ಟಿದ್ದು, ಆತನ ಬಲಗೈಯನ್ನು ಮೊಸಳೆ ತಿಂದುಹಾಕಿದೆ.

ದಾಂಡೇಲಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ರವಿಕುಮಾರ್ ಹಾಗೂ ಪತ್ನಿ ಸಾವಿತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read