ಬೆಂಗಳೂರು : ಕೋರ್ಟ್’ ಗೆ ಬಂದು ಸಾಕ್ಷಿ ಹೇಳ್ತಾಳೆ ಅಂತ ಪತಿಯೋರ್ವ ಪತ್ನಿಗೆ ಚಾಕು ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕಹಳ್ಳಿಯಲ್ಲಿ ನಡೆದಿದೆ.
ಪತಿ ವಿರುದ್ಧ ಕೇಸ್ ದಾಖಲಿಸಿ ದೂರವಾಗಿದ್ದ ಪತ್ನಿಯನ್ನು ಹುಡುಕಿಕೊಂಡು ಬಂದ ಪತಿ ಚಾಕು ಇರಿದು ಹತ್ಯೆಗೆ ಯತ್ನಿಸಿದ್ದಾನೆ.
38 ವರ್ಷದ ಜಮುನಾ ಎಂಬ ಮಹಿಳೆಗೆ ಪತಿ ಗುರುಮೂರ್ತಿ ಚಾಕು ಇರಿದಿದ್ದಾನೆ. ಪತಿ ಪತ್ನಿ ನಡುವೆ ಕೌಟುಂಬಿಕ ಕಲಹವಿತ್ತು, ಅಲ್ಲದೇ ಪತ್ನಿ ಪತಿ ವಿರುದ್ಧ ಕೇಸ್ ದಾಖಲಿಸಿ ಪತಿಯಿಂದ ದೂರ ಇದ್ದರು. ಕೇಸ್ ಕೋರ್ಟ್ ನಲ್ಲಿತ್ತು. ಪತ್ನಿ ಏನಾದರೂ ಕೋರ್ಟ್ ನಲ್ಲಿ ನನ್ನ ವಿರುದ್ಧ ಸಾಕ್ಷಿ ಹೇಳಿ ನನಗೆ ಶಿಕ್ಷೆ ಕೊಡಿಸಬಹುದು ಎಂದು ಹೆದರಿದ ಪತಿ ಪತ್ನಿಗೆ ಚಾಕು ಇರಿದಿದ್ದಾನೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
You Might Also Like
TAGGED:ಕೋರ್ಟ್