ಬೆಂಗಳೂರು: ಪತ್ನಿ ವಿರುದ್ಧ ಪತಿ ಮಹಾಶಯನೊಬ್ಬ ಕಿರುಕುಳ ಆರೋಪ ಮಾಡಿ, ಫೇಸ್ ಬುಕ್ ಲೈವ್ ಗೆ ಬಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಕುವೈತ್ ನಿಂದ ವಾಪಸ್ ಆಗಿರುವ ಪತಿ ಸಲ್ಮಾನ್ ಪಾಷಾ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಗೆ ದಾಖಲಾಗಿದ್ದಾನೆ. ತುಮಕೂರಿನ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಾಲ್ಕು ವರ್ಷಗಳ ಹಿಂದೆ ಸಲ್ಮಾನ್ ಪಾಷಾ ಹಾಗೂ ನಿಖಾತ್ ಪರ್ದೌಷ್ ವಿವಾಹವಾಗಿದ್ದರು. ಎರಡು ವರ್ಷಗಳ ಕಾಲ ದಂಪತಿ ಚನ್ನಾಗಿಯೇ ಇದ್ದರು. ಪತ್ನಿ ಎರಡನೇ ಮುಗುವಿನ ಗರ್ಭಿಣಿಯಾಗಿದ್ದಾಗ ಸಲ್ಮಾನ್ ಪಾಷಾ, ಕೆಲಸಕ್ಕಾಗಿ ಕುವೈತ್ ಗೆ ತೆರಳಿದ್ದ. ಕುವೈತ್ ನಲ್ಲಿ ಹೈಡ್ರಾಲಿಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಇದೀಗ ವಾಪಸ್ ಆಗಿರುವ ಪತಿ ಸಲ್ಮಾನ್ ಪತ್ನಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾನೆ.
ಫೇಸ್ ಬುಕ್ ಲೈವ್ ಗೆ ಬಂದು ಪತ್ನಿ ನಿಖಾತ್ ಲಕ್ಷ ಲಕ್ಷ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾಳೆ. ಆಕೆ ಹಾಗೂ ಆಕೆಯ ಕುಟುಂಬದವರು ನನಗೆ ಹಿಂಸಿಸುತ್ತಿದ್ದಾರೆ. ಪತ್ನಿಗೆ ಆಕೆಯ ಸಂಬಂಧಿ ಬುರ್ಹಾನ್ ಜೊತೆ ಸಂಬಂಧವಿದೆ. ಆತ ಕೂಡ ನಿನ್ನ ಹೆಂಡತಿಗೆ ಹೆಚ್ಚಿಗೆ ಹಣ ನೀಡುವಂತೆ ಹೇಖುತ್ತಿದ್ದಾನೆ. ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥನಾಗಿದ್ದ ಸಲ್ಮಾನ್ ನನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.