ಹೈದರಾಬಾದ್: ಪತಿ ಮಹಾಶಯನೊಬ್ಬ ಗರ್ಭಿಣಿ ಪತ್ನಿಯನ್ನು ಕೊಲೆಗೈದು, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ತುಂಬಿಟ್ಟ ಘೋರ ಘಟನೆ ಹೈದರಾಬಾದ್ ನ ಮೆಡಿಪಲ್ಲಿಯಲ್ಲಿ ನಡೆದಿದೆ.
ಸ್ವಾತಿ ಅಲಿಯಾಸ್ ಜ್ಯೋತಿ (22) ಕೊಲೆಯಾದ ಮಹಿಳೆ. ಮಹೇಂದರ್ ರೆಡ್ಡಿ ಪತ್ನಿಯನ್ನೇ ಕೊಲೆಗೈದ ಪತಿ. ವಿಕಾರಾಬಾದ್ ಮೂಲದ ದಂಪತಿ ಮೆಡಿಪಲ್ಲಿಯ ಬೋಡಪ್ಪಲ್ ನಲ್ಲಿ ವಾಸವಾಗಿದ್ದರು. ತಡರಾತ್ರಿ ಮನೆಯಲ್ಲಿ ಭಾರಿ ಶಬ್ದ ಕೇಳಿದೆ. ಅಕ್ಕಪಕ್ಕದ ಮನೆಯವರು ಹೋಗಿ ನೋಡಿದಾಗ ಸ್ವಾತಿ ಶವವನ್ನು ತಂಡರಿಸಿ ಚೀಲದಲ್ಲಿ ತುಂಬಿಟ್ಟಿರುವುದು ಪತ್ತೆಯಾಗಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಮಹೇಂದರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಯಾವ ಕಾರಣಕ್ಕಾಗಿ ಪತ್ನಿಯನ್ನು ಕೊಲೆಗೈದು ವಿಕೃತಿ ಮೆರೆದಿದ್ದಾನೆ ಎಂಬುದು ತನಿಖೆ ಬಳಿಕವೇ ಗೊತ್ತಾಗಲಿದೆ.