ಲಖನೌ: ಪತ್ನಿ 15 ಸಾವಿರ ಅಹಣ ನೀಡಲು ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆ ನಿದ್ರೆಗೆ ಜಾರಿದ್ದ ವೇಳೆಯೇ ಆಕೆಯನ್ನು ಪತಿ ಮಹಾಶಯ ಹತ್ಯೆಗೈದಿರುವ ಘೋರ ಗಹ್ಟನೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ.
ಆಶಾ ಭಾರತಿ ಪತಿಯಿಂದ ಕೊಲೆಯಾದ ಮಹಿಳೆ. ಕಸ್ತೂರ್ ಬಾ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಆಶಾ ಭಾರತಿಗೆ ಪತ್ನಿ ಮಹಾಶಯ ರವಿ ಪ್ರತಾಪ್, ಪ್ರತಿ ತಿಂಗಳು 15 ಸಾವಿ ಹಣ ಕೊಡುವಂತೆ ಒತ್ತಡಹಾಕುತ್ತಿದ್ದ. ಇದರಿಂದ ಬೇಸತ್ತ ಆಶಾ ಭಾರತಿ ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ ಎಂದಿದ್ದಳು. ಇದೇ ವಿಚಾರವಾಗಿ ಪತಿ ಗಲಾಟೆ ಅಮಡಿದ್ದ ಅನಿವಾರ್ಯವಾಗಿ 5 ಸಾವಿರ ಹಣ ಕೊಡಲು ಒಪ್ಪಿದ್ದಳು.
ಕೇವಲ 5 ಸಾವಿ ಹಣ ಕೊಡುವುದಾಗಿ ಹೆಂಡತಿ ಹೇಳಿದ್ದಕ್ಕೆ ಕೋಪಗೊಂಡಿದ್ದ ರವಿ ಪ್ರತಾಪ್, ಪತ್ನಿಗೆ ಕೊಡಬಾರದ ಹಿಂಸೆ ಕೊಡುತ್ತಿದ್ದ. ಇಬ್ಬರ ನಡುವೆ ಜಗಳ ವಿಪರೀತಕ್ಕೆ ತಲುಪಿತ್ತು. ಸುಮ್ಮನಿದ್ದ ರವಿ ಪ್ರತಾಪ್ ಪತ್ನಿ ನಿದ್ದೆ ಮಾಡುವುದನ್ನೇ ಕಾಯುತ್ತಿದ್ದ. ತಡರಾತ್ರಿ ಪತ್ನಿ ಮಲಗಿದ್ದಾಗ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಶಬ್ದ ಕೇಳುತ್ತಿದ್ದಂತೆ 13 ವರ್ಷದ ಮಗ ಬಂದು ತಂದೆಯನ್ನು ತಡೆಯಲು ಯತ್ನಿಸಿದ್ದಾನೆ. ಈ ವೇಳೆ ತಂದೆ ಮಗನನ್ನು ಅಟ್ಟಾಡಿಸಿಕೊಂಡು ಹೋಗಿದ್ದಾನೆ. ಆತ ಅಕ್ಕಪಕ್ಕದವರನ್ನು ಕರೆದು ತಪ್ಪಿಸಿಕೊಂಡಿದ್ದಾನೆ.
ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಆಶಾ ಭಾರತಿ ಗಂಭೀರ ಸ್ಥಿತಿಯಲ್ಲಿದ್ದಳು. ತಕ್ಷಣ ಆಕೆಯನ್ನು ನೆರೆಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲೇ ಶಾ ಭಾರತಿ ಕೊನೆಯುಸಿರೆಳೆದಿದ್ದಳು. ಆರೋಪಿ ರವಿ ಪ್ರತಾಪ್ ಪರಾರುಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.