ಚಿಕ್ಕಮಗಳೂರು: ವರದಕ್ಷಿಣೆ ವಿಚಾರವಾಗಿ ಪತ್ನಿ ಕೊಲೆ ಮಾಡಿ ಕೊಳವೆ ಬಾವಿಯಲ್ಲಿ ಪತ್ನಿ ಮೃತದೇಹ ಎಸೆದಿದ್ದ ಪತಿಯನ್ನು ಚಿಕ್ಕಮಗಳೂರು ಜಿಲ್ಲೆ ಕಡೂರು ಪೊಲೀಸರು ಬಂಧಿಸಿದ್ದಾರೆ.
ವಿಜಯಕುಮಾರ್ ಬಂಧಿತದ ಆರೋಪಿ. ಭಾರತಿ ಕೊಲೆಯಾದ ಮಹಿಳೆ. ಸೆಪ್ಟೆಂಬರ್ 5ರಂದು ಪತ್ನಿ ಕೊಲೆ ಮಾಡಿ ಕೊಳವೆ ಬಾವಿಗೆ ಎಸೆದಿದ್ದ ವಿಜಯಕುಮಾರ್, ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದ ಭಾರತಿ ಅವರ ತಾಯಿ ಪುತ್ರಿ ಕೊಲೆಯಾಗಿರುವ ಬಗ್ಗೆ ದೂರು ನೀಡಿದ್ದರು. ಕಡೂರು ಪೊಲೀಸರು ತನಿಖೆ ನಡೆಸಿದಾಗ ವಿಜಯಕುಮಾರ್ ಪತ್ನಿಯನ್ನು ಕೊಂದು ತನ್ನ ಜಮೀನಿನಲ್ಲಿದ್ದ ಕೊಳವೆ ಬಾವಿಯಲ್ಲಿ ಎಸೆದಿರುವುದು ಗೊತ್ತಾಗಿದೆ. ಆರೋಪಿ ವಿಜಯಕುಮಾರ್, ಆತನ ತಂದೆ, ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.