ಪತ್ನಿಯ ರೀಲ್ ನೋಡಿ ಪತಿಗೆ ಕೋಪ ; ಕೊಲೆ ಮಾಡಿ ಶವವನ್ನು 14 ತುಂಡುಗಳಾಗಿ ಕತ್ತರಿಸಿ ಎಸೆದ ಪಾಪಿ

ಪುರುಷನೊಂದಿಗೆ ಮಾಡಿದ್ದ ಪತ್ನಿಯ ರೀಲ್ ನೋಡಿ ಕುಪಿತಗೊಂಡ ಪತಿ ಆಕೆಯನ್ನು ಕೊಲೆ ಮಾಡಿ ಶವವನ್ನು 14 ತುಂಡುಗಳಾಗಿ ಕತ್ತರಿಸಿ ಎಸೆದಿದ್ದಾನೆ. ನಾಗರಿಕ ಸಮಾಜವನ್ನ ಬೆಚ್ಚಿಬೀಳಿಸುವ ಈ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಡೆದಿದೆ.

ನದೀಮುದ್ದೀನ್ ಎಂಬ ವ್ಯಕ್ತಿ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದಾದ ಬಳಿಕ ಮೃತದೇಹವನ್ನು 14 ತುಂಡು ಮಾಡಿ ಆಟೋದಲ್ಲಿ ತುಂಬಿಕೊಂಡು ನಗರದ ವಿವಿಧ ಭಾಗಗಳಿಗೆ ಕೊಂಡೊಯ್ದು ಎಸೆದಿದ್ದಾನೆ. ಮೃತದೇಹದ ಗುರುತು ಪತ್ತೆಯಾಗದಂತೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭೋಪಾಲ್ ಪೋಲೀಸರ ಪ್ರಕಾರ, ಆರೋಪಿಗೆ ತನ್ನ ಹೆಂಡತಿಯ ಮೇಲೆ ಅನುಮಾನವಿದ್ದು ಈ ಕಾರಣದಿಂದಾಗಿ ಇಬ್ಬರ ನಡುವೆ ಜಗಳಗಳು ನಡೆಯುತ್ತಿದ್ದವು. ಮೇ 21 ರಂದು ಪತ್ನಿಯನ್ನು ಭೇಟಿಯಾಗಲೆಂದು ಕರೆದಿದ್ದ ಆತ ಆಕೆಯ ಫೋನ್‌ನಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಪತ್ನಿ ರೀಲ್ ಮಾಡಿದ್ದನ್ನು ನೋಡಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ ಆಕೆಯನ್ನು ಕತ್ತರಿಸಿ ಹತ್ಯೆ ಮಾಡಿದ್ದಾನೆ. ತನಿಖೆಯಲ್ಲಿ ನದೀಮುದ್ದೀನ್‌ ಗುರುತಿಸಿದ ಮೇರೆಗೆ ಅರ್ಧ ಸುಟ್ಟ ದೇಹದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳ ಪೋಷಕರು ನೀಡಿದ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಆರೋಪಿ ಪತಿ ಪದೇ ಪದೇ ಹೇಳಿಕೆ ಬದಲಿಸುತ್ತಿದ್ದರಿಂದ ತನಿಖಾ ತಂಡಕ್ಕೆ ಅನುಮಾನ ಬಂದಿತ್ತು. ಪೊಲೀಸರು ಆತನನ್ನು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಅರ್ಧ ಸುಟ್ಟ ದೇಹದ ಕೆಲವು ತುಣುಕುಗಳು ಪತ್ತೆಯಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 21 ರಂದು ಆರೋಪಿ ತನ್ನ ಪತ್ನಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಇದಾದ ಬಳಿಕ ಮುಂದಿನ ದಿನಗಳಲ್ಲಿ ಶವ ವಿಲೇವಾರಿ ಮಾಡುವ ಕೆಲಸ ಮಾಡಿದ್ದು ಶವದ ಕೆಲವು ತುಂಡುಗಳನ್ನು ನಗರದಿಂದ ದೂರದ ಪ್ರದೇಶಗಳಲ್ಲಿ ಎಸೆದಿದ್ದ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read