ಮಗಳ ಮದುವೆಗೆಂದು ಕೂಡಿಟ್ಟ ಹಣ ಎಗರಿಸಿ ಪ್ರಿಯಕರನ ಜೊತೆ ಮಹಿಳೆ ಪರಾರಿ….!

ಮಹಿಳೆಯೊಬ್ಬಳು ತನ್ನ ಮಗಳ ಮದುವೆಗೆಂದು ಕೂಡಿಟ್ಟ ಹಣವನ್ನು ತೆಗೆದುಕೊಂಡು ತನ್ನ ಪ್ರಿಯಕರನ ಜೊತೆ ಪರಾರಿಯಾಗಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಮುಜಫರ್ ಪುರದ ಈ ಮಹಿಳೆ ಮಗ – ಮಗಳು ಹಾಗೂ ಪತಿಯನ್ನು ತೊರೆದು ಈಗ ಪ್ರಿಯಕರನ ಜೊತೆ ಮತ್ತೊಮ್ಮೆ ಮದುವೆ ಮಾಡಿಕೊಂಡಿದ್ದಾಳೆ.

16 ವರ್ಷಗಳ ಹಿಂದೆ ಈ ಮಹಿಳೆ ಪ್ರೀತಿಸಿ ಮದುವೆಯಾಗಿದ್ದಳು ಎನ್ನಲಾಗಿದ್ದು, ಇವರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ಇದರ ಮಧ್ಯೆ ಸಂಸಾರ ರಥ ಸಾಗಿಸಲು ಹೆಚ್ಚಿನ ಹಣ ದುಡಿಯುವ ಸಲುವಾಗಿ ಮಹಿಳೆಯ ಪತಿ ಮುಂಬೈಗೆ ತೆರಳಿದ್ದು, ಇದೇ ಸಂದರ್ಭ ಸಾಧಿಸಿದ ಆಕೆ ಮೊಬೈಲ್ ಮೂಲಕ ಮತ್ತೊಬ್ಬ ಪುರುಷನನ್ನು ಪರಿಚಯ ಮಾಡಿಕೊಂಡಿದ್ದಾಳೆ.

ಇವರಿಬ್ಬರ ಮೊಬೈಲ್ ಮಾತುಕತೆ ಕ್ರಮೇಣ ಪ್ರೀತಿಗೆ ತಿರುಗಿದ್ದು, ಮುಂಬೈನಿಂದ ಮನೆಗೆ ಬಂದಿದ್ದ ಪತಿಗೂ ಈ ವಿಷಯ ತಿಳಿದಿದೆ. ಹೀಗಾಗಿ ಇಬ್ಬರ ನಡುವೆ ಪದೇ ಪದೇ ಜಟಾಪಟಿ ನಡೆಯುತ್ತಿತ್ತು ಎನ್ನಲಾಗಿದ್ದು, ಅಂತಿಮವಾಗಿ ಈ ಮಹಿಳೆ ತನ್ನ ಮಗಳ ಮದುವೆಗೆಂದು ಕೂಡಿಟ್ಟ ಹಣವನ್ನು ತೆಗೆದುಕೊಂಡು ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.

ಇದರಿಂದ ಕಂಗಾಲಾದ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದು, ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಪತ್ತೆ ಹಚ್ಚಿ ಕರೆತಂದಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಪತಿ ಜೊತೆ ತೆರಳಲು ನಿರಾಕರಿಸಿರುವ ಆಕೆ ತನ್ನ ಪತಿ ಕಳೆದ ನಾಲ್ಕು ವರ್ಷಗಳಿಂದ ತನಗೆ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದ್ದಾಳೆ. ಅಲ್ಲದೆ ತಾನು ಪ್ರಿಯಕರನನ್ನು ಈಗಾಗಲೇ ಮದುವೆಯಾಗಿದ್ದು, ತಮ್ಮನ್ನು ಬಿಡುವಂತೆ ಕೇಳಿಕೊಂಡಿದ್ದಾಳೆ. ಇದೀಗ ಪೊಲೀಸರು ಪ್ರಕರಣವನ್ನು ಯಾವ ರೀತಿ ಇತ್ಯರ್ಥಪಡಿಸಬೇಕು ಎಂಬ ಚಿಂತನೆಯಲ್ಲಿ ಇದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read