ಮದುವೆ ಸಮಾರಂಭವೊಂದರ ತಮಾಷೆ ಸನ್ನಿವೇಶದ ವಿಡಿಯೋ ವೈರಲ್

ಭೂರೀ ಭೋಜನ, ಸಂಗೀತ ಹಾಗೂ ನೃತ್ಯಗಳಲ್ಲದೇ ಭಾರತೀಯ ಮದುವೆ ಸಮಾರಂಭಗಳಲ್ಲಿ ಗಂಡು-ಹೆಣ್ಣಿನ ಕಡೆಯವರ ವಿನೋದಮಯವಾದ ಪರಸ್ಪರ ಕಾಲೆಳೆಯುವಿಕೆಯನ್ನು ನೋಡುವುದು ಸಹ ಒಂದು ಮೋಜಿನ ಅನುಭವ.

ಮದುಮಗನಿಗೆ ಹುಡುಗಿಯ ಸಹೋದರಿ ಆರತಿ ಮಾಡುವಾಗ ಅವರಿಬ್ಬರ ನಡುವೆ ನಡೆಯುವ ವಿನೋದಮಯ ಸಂವಹನಗಳೂ ಸಹ ಭಾರೀ ಫನ್ನಿಯಾಗಿರುತ್ತವೆ. ಇಂಥದ್ದೇ ಸನ್ನಿವೇಶದ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರಿಗೆ ಖುದ್ದು ತಮ್ಮ ಮದುವೆ ದಿನದ ಅನುಭವ ನೆನಪಾಗುತ್ತಿದೆ.

ತನ್ನ ಅಕ್ಕನ ಮದುವೆ ಸಮಾರಂಭದಂದು ಭಾವನನ್ನು ಮದುವೆಮನೆಗೆ ಸ್ವಾಗತಿಸುವ ನಾದಿನಿ ಈ ವಿಡಿಯೋ ಮೂಲಕ ಭಾರೀ ಸದ್ದು ಮಾಡಿದ್ದಾಳೆ. ಭಾವನಿಗೆ ಕೊಡಲೆಂದು ಸಿಹಿ ತಿನಿಸುಗಳಿದ್ದ ತಟ್ಟೆ ಹಿಡಿದಿರುವ ನಾದಿನಿ, ಆತನಿಗೆ ತಿನಿಸಲೆಂದು ಬಾಯಿಯ ಹತ್ತಿರ ಸಿಹಿ ತೆಗೆದುಕೊಂಡು ಹೋಗಿ ಆತ ತಿನ್ನಲೆಂದು ಬಾಯಿ ತೆರೆಯುತ್ತಲೇ ಮತ್ತೆ ಹಿಂದಕ್ಕೆಳೆದುಕೊಂಡು ಆತನಿಗೆ ಆಟವಾಡಿಸುತ್ತಿರುವುದನ್ನು ನೋಡಬಹುದಾಗಿದೆ. ನಾದಿನಿ ಕೈ ಹಿಡಿದುಕೊಂಡು ಸಿಹಿಯನ್ನು ತನ್ನ ಬಾಯಿಗೆ ಇಟ್ಟುಕೊಳ್ಳಲು ಯತ್ನಿಸುವ ಭಾವನನ್ನು ಛೇಡಿಸುವ ನಾದಿನಿಯ ಸ್ನೇಹಿತೆಯರು, ಹಾಗೆ ಮಾಡುವುದು ಆಟದ ನಿಯಮಕ್ಕೆ ವಿರುದ್ಧವಾದದ್ದು ಎನ್ನುತ್ತಾರೆ.

ಹಮ್ ಆಪ್ಕೇ ಹೌ ಕೌನ್ ಚಿತ್ರದಲ್ಲಿ ಮಾಧುರಿ ದೀಕ್ಷಿತ್‌ ಹಾಗೂ ಸಲ್ಮಾನ್ ಖಾನ್ ನಡುವಿನ ದೃಶ್ಯವೊಂದರ ಮರುಸೃಷ್ಟಿಯಂತೆ ಕಾಣುವ ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

https://youtu.be/7dGjgAcQtIA

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read