BREAKING : ‘ಉಜ್ವಲ್ ಯೋಜನೆ’ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ : LPG ಸಿಲಿಂಡರ್ ಸಬ್ಸಿಡಿ ರೂ.200 ರಿಂದ 300ಕ್ಕೆ ಹೆಚ್ಚಳ |Ujjwala Yojana

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಸಬ್ಸಿಡಿ ಮೊತ್ತವನ್ನು ಪ್ರತಿ ಎಲ್ ಪಿ ಜಿ ಸಿಲಿಂಡರ್ ಗೆ 200 ರೂ.ಗಳಿಂದ 300 ರೂ.ಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ಪ್ರಕಟಿಸಿದ್ದಾರೆ.

ಉಜ್ವಲ ಫಲಾನುಭವಿಗಳು ಪ್ರಸ್ತುತ 14.2 ಕೆಜಿ ಸಿಲಿಂಡರ್ ಗೆ ಮಾರುಕಟ್ಟೆ ಬೆಲೆ 903 ರೂ.ಗಳಿಂದ 703 ರೂ.ಗಳನ್ನು ಪಾವತಿಸುತ್ತಿದ್ದಾರೆ. ಕೇಂದ್ರ ಸಚಿವ ಸಂಪುಟದ ನಿರ್ಧಾರದ ನಂತರ, ಅವರು ಈಗ 603 ರೂ.ಗಳನ್ನು ಪಾವತಿಸಲಿದ್ದಾರೆ. ಈ ಮೂಲಕ ಉಜ್ವಲ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.
ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವರು, ಉಜ್ವಲ ಯೋಜನೆ ಫಲಾನುಭವವಿಗಳು 300 ರೂ.ಗಳ ಸಬ್ಸಿಡಿ ಪಡೆಯಲಿದ್ದಾರೆ. ಉಜ್ವಲ ಯೋಜನೆ ಮಹಿಳೆಯರ ಕುಟುಂಬಕ್ಕೆ ದೊಡ್ಡ ಕೊಡುಗೆ ನೀಡಿದೆ. ಇನ್ನುಮುಂದೆ 200 ರೂ.ಗಳ ಬದಲು, 300 ರೂ.ಗಳ ಸಬ್ಸಿಡಿ ಲಭ್ಯವಿರುತ್ತದೆ ಎಂದು ಹೇಳಿದರು.

https://twitter.com/ANI/status/1709506694328541692?ref_src=twsrc%5Etfw%7Ctwcamp%5Etweetembed%7Ctwterm%5E1709506694328541692%7Ctwgr%5E62a1ffef37a74a34ff8ec4b0c9b2d743f26c746f%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fbreaking-dussehra-gift-for-ujjwala-beneficiaries-cylinder-subsidy-increased-from-rs-200-to-rs-300%2F

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read