ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಅವಘಡ; ಮಹಿಳೆ ಸ್ಥಿತಿ ಗಂಭೀರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪತಿಯಿಂದಲೇ ಪತ್ನಿ ಹತ್ಯೆಗೆ ಯತ್ನ

ಹುಬ್ಬಳ್ಳಿ: ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಗ್ಯಾಸ್ ಸೋರಿಕೆ ಮಾಡಿ ಪತ್ನಿಯೇ ಪತಿಯನ್ನು ಹತ್ಯೆಗೈಯ್ಯಲು ಯತ್ನಿಸಿದ್ದ ಎಂಬ ಆರೋಪ ಕೇಳಿಬಂದಿದೆ.

ಹಿಬ್ಬಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಅವಘಡದಲ್ಲಿ ಮಹಿಳೆಯ ದೇಹ ಶೇ.75ರಷ್ಟು ಭಾಗ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ. ಮಹಿಳೆಯ ಸಹೋದರಿ ಹಾಗೂ ತಾಯಿ ಗಂಡನೇ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಆತನೇ ಗ್ಯಾಸ್ ಲೀಕ್ ಮಾಡಿ ಬೆಂಕಿ ಹೊತ್ತಿಕೊಳ್ಳುವಂತೆ ಮಾಡಿ ಸಿಲಿಂಡರ್ ಸೋರಿಕೆಯಾಗಿ ಬ್ಲಾಸ್ಟ್ ಆಗಿ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದಾಗ್ಯೂ ಪತಿ ಮಹಾಶಯ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನಿಡುವುದು. ಹೊಡೆಯುವುದು, ಬಾಯಿಗೆ ಬಂದಂತೆ ಮಾತನಾಡುವುದು ಮಾಡುತ್ತಿದ್ದ. ಈ ಹಿಂದೆ ಹಲವು ಬಾರಿ ಹಲ್ಲೆ ನಡೆಸಿದ್ದ. ತವರು ಮನೆಯವರು, ಮಹಿಳೆಯ ಸಹೋದರಿ ಮನೆಗೆ ಹೋದಾಗಲೂ ಕಿರಿಕಿರಿ ಮಾಡಿ ಗಲಾಟೆ ಮಾಡುತ್ತಿದ್ದ. ಕರ್ಚಿಫ್ ತಂದು ಕೊಡಲು ತಡ ಮಾಡಿದೆ ಎಂದು ಕ್ಷುಲ್ಲಕ ಕಾರಣಕ್ಕೂ ಕಾಲು ಕೆರೆದು ಜಗಳ ಮಾಡುವುದು, ಹೊಡೆಯುವುದು ಮಾಡುತ್ತಿದ್ದ. ಸಂಬಂಧಿಗಳು ಮನೆಗೆ ಹೋದರೆ ಪತ್ನಿಗೆ ಇನ್ನಷ್ಟು ಹಿಂಸೆ ಕೊಡುತ್ತಾನೆ, ಜಗಳವಾಡುತ್ತಾನೆ ಎಂದು ಹೊಗುವುದನ್ನೂ ಕಡಿಮೆ ಮಾಡಿದ್ದೆವು. ಆದರೂ ಕಿರುಕುಳ ನಿಲ್ಲಿಸದ ಪತಿ ಮತ್ತೆ ಮತ್ತೆ ಹಲ್ಲೆ ನಡೆಸುವುದು ಗಲಾಟೆ ಮಾಡುವುದು ಮಾಡುತ್ತಿದ್ದ. ಈ ಬಗ್ಗೆ ಅಕ್ಕ ಹಲವು ಬಾರಿ ನನ್ನ ಬಳಿ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಹೊಡೆದು ಹಲ್ಲೆ ನಡೆಸಿರುವ ಫೋಟೀಗಳನ್ನು ಕಳುಹಿಸಿದ್ದಳು. ಪೊಲೀಸ್ ಠಾಣೆಗೆ ದೂರು ನೀಡೋಣ ಎಂದರೆ ಮನೆ ಮರ್ಯಾದೆ ಪ್ರಶ್ನೆ ಸ್ವಲ್ಪ ದಿನ ಕಾಯೋಣ ಎಂದಿದ್ದಳು. ಅಲ್ಲದೇ ಆತನಿಗೆ ಪ್ರಭಾವಿಗಳ ಬೆಂಬಲವೂ ಇರುವುದರಿಂದ ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದರು ಎಂದು ಮಹಿಳೆಯ ಸಹೋದರು ಆರೋಪಿಸಿದ್ದಾರೆ.

ಅಕ್ಕನ ಸ್ಥಿತಿ ಗಂಭೀರವಾಗಿದೆ. ಶೇ.75ರಷ್ಟು ಭಾಗ ಸುಟ್ಟುಹೋಗಿದೆ. ಹುಬ್ಬಳ್ಳಿ-ಧಾರವಾಡ ಕಮಿಷನರ್ ಭೇಟಿಯಾಗಿ ದೂರು ನೀಡಿದ್ದೇವೆ. ಅವರ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read