ಹುಬ್ಬಳ್ಳಿ: ಭಿಕ್ಷೆ ಬೇಡುವ ನೆಪದ;ಲಿ ಮನೆ ಮನೆಗೆ ಬಂದು ಮಹಿಳೆಯರ ಮುಂದೆ ನಿಂತು ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಸ್ಥಳೀತ್ಯರು ಹಿಡಿದು ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಕಂಠಪೂರ್ತಿ ಕುಡಿದು ಭಿಕ್ಷೆ ಬೇಡಲು ಬರುತ್ತಿದ್ದ ವ್ಯಕ್ತಿ ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸುತ್ತಿದ್ದ. ಸಾರ್ವಜನಿಕರು ಆತ್ನನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಆರೋಪಿ ಕೈ ಮುಗಿದು, ಕಾಲಿಫ಼್ಗೆ ಬಿದ್ದು ತನ್ನನ್ನು ಬಿಟ್ಟು ಬಿಡುವಂತೆ ಕೇಳಿಕೊಂಡಿದ್ದಾನೆ.
ಹುಬ್ಬಳ್ಳಿಯ ಅಮರಗೋಳ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲಿ ವಿಡಿಯೋ ವೈರಲ್ ಆಗಿದೆ.
