ನವದೆಹಲಿ: ಕೋಟಿಗಟ್ಟಲೆ ಹಣ ನೀಡಿ ಐಷಾರಾಮಿ ಕಾರ್ ಖರೀದಿಸುವುದನ್ನು ಕೇಳಿರುತ್ತೀರಿ. ಆದರೆ, ಹರಿಯಾಣದ ವ್ಯಕ್ತಿಯೊಬ್ಬರು ತಮಗೆ ಇಷ್ಟವಾದ ಫ್ಯಾನ್ಸಿ ನಂಬರ್ ಖರೀದಿಗೆ ಬರೋಬ್ಬರಿ 1.17 ಕೋಟಿ ರೂಪಾಯಿ ಪಾವತಿಸಿದ್ದಾರೆ.
ಇದು ದೇಶದಲ್ಲಿಯೇ ಅತಿ ದುಬಾರಿ ಫ್ಯಾನ್ಸಿ ನಂಬರ್ ಖರೀದಿಯಾಗಿದೆ. ವಿಐಪಿ ಫ್ಯಾನ್ಸಿ ನಂಬರ್ ಗಳ ಹರಾಜು ಪ್ರಕ್ರಿಯೆಯಲ್ಲಿ HR 88 B8888 ಸಂಖ್ಯೆಗೆ ಬರೋಬ್ಬರಿ 45 ಮಂದಿ ಬಿಡ್ ಸಲ್ಲಿಸಿದ್ದರು. 50,000 ರೂ. ನಿಂದ ಆರಂಭವಾದ ಈ ಮೂಲ ಬೆಲೆಯನ್ನು ವ್ಯಕ್ತಿಯೊಬ್ಬರು 1.17 ಕೋಟಿ ರೂ. ನೀಡಿ ಖರೀದಿಸಿದ್ದಾರೆ. ಇದರ ವಿಶೇಷವೆಂದರೆ ಬಿ ಅಕ್ಷರವನ್ನು ಇಂಗ್ಲಿಷ್ ನಲ್ಲಿ ದಪ್ಪ ಅಕ್ಷರದಲ್ಲಿ ಬರೆಸಿದರೆ 8ರ ಸರಣಿಯಂತೆ ಕಾಣಿಸುತ್ತದೆ.
ಇದೀಗ HR88 B8888 ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆಯಾಗಿದ್ದು, ಇದರ ಬೆಲೆ 1.17 ಕೋಟಿ ರೂ. ಆಗಿದೆ.
ಕಳೆದ ವಾರ, ‘HR22W222’ ನೋಂದಣಿ ಸಂಖ್ಯೆ 37.91 ಲಕ್ಷ ರೂ.ಗಳಿಗೆ ಮಾರಾಟವಾಯಿತು.
ಈ ವರ್ಷದ ಆರಂಭದಲ್ಲಿ, ಏಪ್ರಿಲ್‌ನಲ್ಲಿ, ಕೇರಳದ ಟೆಕ್ ಬಿಲಿಯನೇರ್ ವೇಣು ಗೋಪಾಲಕೃಷ್ಣನ್ ತಮ್ಮ ಲ್ಯಾಂಬೋರ್ಘಿನಿ ಉರುಸ್ ಪರ್ಫಾರ್ಮೆಂಟ್ “KL 07 DG 0007” ಗಾಗಿ 45.99 ಲಕ್ಷ ರೂಪಾಯಿ ವೆಚ್ಚದಲ್ಲಿ VIP ಪರವಾನಗಿ ಪ್ಲೇಟ್ ಖರೀದಿಸಿದರು. ಈ ಸಂಖ್ಯೆಯ ಬಿಡ್ಡಿಂಗ್ 25,000 ರೂಪಾಯಿಗಳಿಂದ ಪ್ರಾರಂಭವಾಯಿತು ಮತ್ತು ತ್ವರಿತವಾಗಿ ಏರಿಕೆಯಾಯಿತು, ಇದು ದಾಖಲೆಯ ಅಂತಿಮ ಬೆಲೆಗೆ ಕಾರಣವಾಯಿತು.
