ಥಂಡಿ ಸಮಯದಲ್ಲಿ ಹಿಟ್ಟು ಹಾಳಾಗದಂತೆ ಸಂರಕ್ಷಿಸುವುದು ಹೇಗೆ……?

ಮಳೆಗಾಲ ಇಲ್ಲವೆ ಚಳಿಗಾಲದಲ್ಲಿ ಗೋಧಿ, ಮೈದಾಹಿಟ್ಟಿಗೆ ಬಹುಬೇಗ ಹುಳುಗಳು ಆವರಿಸಿಕೊಳ್ಳುತ್ತದೆ. ಇದನ್ನು ದೂರ ಮಾಡಿ ಹಿಟ್ಟನ್ನು ದೀರ್ಘಕಾಲ ಸಂರಕ್ಷಿಸಿ ಇಡುವುದು ಹೇಗೆ ಎಂದು ತಿಳಿಯಿರಿ.

ಹಿಟ್ಟಿನ ಸಂಗ್ರಹಣೆಗೆ ಸಾಧ್ಯವಾದಷ್ಟು ಸ್ಟೀಲ್ ಡಬ್ಬಿ ಗಳನ್ನೇ ಬಳಸಿ. ಹಾಗೆ ಸಂಗ್ರಹಿಸಿಡುವ ಮೊದಲು ಡಬ್ಬಿಯ ತಳಭಾಗದಲ್ಲಿ ಯಾವುದೇ ನೀರಹನಿ ಅಥವಾ ತೇವಾಂಶ ಉಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸ್ಟೀಲ್ ಪಾತ್ರೆಯ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ. ಯಾವುದೇ ಕಾರಣಕ್ಕೂ ಇದನ್ನು ತೆರೆಯದಿರಿ.

ಹಿಟ್ಟಿನ ಜೊತೆ ತುಸು ಉಪ್ಪು ಉದುರಿಸಿ. ಇದರಿಂದ ಹುಳುಗಳು ಬರದಂತೆ ತಡೆಯಬಹುದು.

ಉಪ್ಪು ಬೇಡ ಎನ್ನುವವರು ಎಂಟರಿಂದ ಹತ್ತು ಒಣ ಮೆಣಸಿನಕಾಯಿಯನ್ನು ಅದರೊಂದಿಗೆ ಸೇರಿಸಿ. ಇದು ಕೂಡ ಹುಳುಗಳಿಂದ ಹಿಟ್ಟನ್ನು ರಕ್ಷಿಸಲು ನೆರವಾಗುತ್ತದೆ.

ಈಗಾಗಲೇ ನಿಮ್ಮ ಹಿಟ್ಟಿನಲ್ಲಿ ಹುಳುಗಳು ಕಾಣಿಸಿಕೊಂಡಿವೆ ಎಂದಾದರೆ ಬಿಸಿಲಿನಲ್ಲಿ ಒಣಗಿಸಿ. ಆಗ ಮಾತ್ರ ಅವು ಹಿಟ್ಟಿನಿಂದ ಹೊರಹೋಗುತ್ತದೆ ಇಲ್ಲ ಅಲ್ಲೇ ಸಾಯುತ್ತದೆ. ಅಂಥ ಸಂದರ್ಭದಲ್ಲಿ ಹಿಟ್ಟನ್ನು ಮತ್ತೆ ಜಾಲರಿ ಹಿಡಿದು ಬಳಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read