‘ಸೌತೆಕಾಯಿ’ ಸ್ಯಾಂಡ್‌ ವಿಚ್ ಮಾಡುವುದು ಹೇಗೆ……?

ಸೌತೆಕಾಯಿಯಲ್ಲಿ ದೇಹಕ್ಕೆ ಬೇಕಾಗುವ ಒಳ್ಳೆಯ ಪೋಷಕಾಂಶಗಳು ಹೇರಳವಾಗಿದೆ. ಇದನ್ನು ಆಹಾರ ಪದಾರ್ಥಗಳಲ್ಲಷ್ಟೇ ಅಲ್ಲದೇ ಫೇಸ್‌ ಪ್ಯಾಕ್‌ ಗಳಲ್ಲಿಯೂ ಬಳಕೆ ಮಾಡಲಾಗುತ್ತದೆ.

ಸೌತೆಕಾಯಿಯಿಂದ ಸಲಾಡ್, ಸಾರು, ಜ್ಯೂಸ್ ಹೀಗೆ ಅನೇಕ ಭಕ್ಷ್ಯಗಳನ್ನು ತಯಾರಿಸುವುದಲ್ಲದೇ ಸ್ಯಾಂಡ್‌ ವಿಚ್ ಸಹ ಮಾಡಿ ಸವಿಯಬಹುದು. ಅದು ಹೇಗೆ ಅಂತಾ ನೀವೂ ಒಮ್ಮೆ ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಾಗ್ರಿಗಳು

ಬ್ರೆಡ್ ತುಂಡು 4 ರಿಂದ 6
ಸೌತೆಕಾಯಿ 1
ಚೀಸ್ ಸ್ವಲ್ಪ
ಬೆಣ್ಣೆ 2 ಚಮಚ
ಕರಿ ಮೆಣಸಿನ ಪುಡಿ ಚಿಟಿಕೆಯಷ್ಟು
ಚಾಟ್ ಮಸಾಲಾ ಚಿಟಿಕೆಯಷ್ಟು
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ಸೌತೆಕಾಯಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು.

ನಂತರ ಬ್ರೆಡ್‌ನ ತುದಿಯನ್ನು ಕತ್ತರಿಸಿ, ಅದಕ್ಕೆ ಬೆಣ್ಣೆಯನ್ನು ಸವರಬೇಕು. ನಂತರ ಚೀಸ್, ಸೌತೆಕಾಯಿ, ಕರಿ ಮೆಣಸಿನ ಪುಡಿ, ಉಪ್ಪು, ಚಾಟ್ ಮಸಾಲಾ ಪುಡಿಯನ್ನು ಹಾಕಿ ಇನ್ನೊಂದು ಬ್ರೆಡ್‌ ನಿಂದ ಕವರ್ ಮಾಡಬೇಕು.

ನಂತರ ತವಾವನ್ನು ಬಿಸಿ ಮಾಡಿ ಅದಕ್ಕೆ ಬೆಣ್ಣೆ ಸವರಿ ಅದರ ಮೇಲೆ ಈ ಎಲ್ಲಾ ಮಿಶ್ರಣ ಮಾಡಿದ ಬ್ರೆಡ್ ಇಟ್ಟು ಎರಡೂ ಬದಿ ರೋಸ್ಟ್ ಮಾಡಿದರೆ ಸೌತೆಕಾಯಿಯ ಸ್ಯಾಂಡ್‌ ವಿಚ್ ಸವಿಯಲು ಸಿದ್ಧ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read